

ಮೊಳಕಾಲ್ಮೂರು: ಗ್ರಾಮೀಣ ಪ್ರದೇಶದ ಜನರು ಮನೆ ಬಿಟ್ಟು ಹೊರಗೆ ಬರಕೂಡದೆಂದು ಬುದ್ಧಿ ಮಾತು ಹೇಳಲು ಸ್ವತಃ ತಸಹೀಲ್ದಾರ್ ಎಂ.ಬಸವರಾಜ್ ಶನಿವಾರ ರಸ್ತೆಗೆ ಇಳಿದರು.
ಸಿಬ್ಬಂದಿ ಸಮೇತ ತಾಲೂಕಿನ ತಮ್ಮೇನಹಳ್ಳಿ, ರಾಂಪುರ, ಸಿದ್ದಯ್ಯನಕೋಟೆ ಚೆಕ್‌ಪೋಸ್ಟ್ ಕೇಂದ್ರಗಳಿಗೆ ಭೇಟಿ ನೀಡಿದ ಅವರು, ಅನಗತ್ಯವಾಗಿ ಮನೆಯಿಂದ ಹೊರಬರದಂತೆ ಮನವಿ ಮಾಡಿದರು.
ಅಪರಿಚಿತರ ಬಗ್ಗೆ ನಿಗಾವಹಿಸಬೇಕು. ಅನುಮಾನ ಬಂದರೆ ತಕ್ಷಣ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವಂತೆ ಜನರಿಗೆ ತಿಳಿಸಿದರು.
ಕೆಲ ಊರಿನ ಜನ ಅನ್ಯರು ಗ್ರಾಮಕ್ಕೆ ಪ್ರವೇಶ ಇಲ್ಲ ಎಂದು ಸಂಪರ್ಕ ರಸ್ತೆಗಳಿಗೆ ಬೇಲಿ ಹಾಕುವ ಸ್ವಯಂ ನಿರ್ಧಾರ ಸರಿಯಲ್ಲ. ಇದರಿಂದ ಅನ್ಯ ಗ್ರಾಮಗಳ ಜನರಿಗೆ ಸೇರಿ ಅಗತ್ಯ ವಸ್ತು ಪೂರೈಸುವ ಮಂದಿಗೆ ಸಮಸ್ಯೆ ಆಗಲಿದೆ ಎಂದು ಹೇಳಿದರು.