ಮೊಳಕಾಲ್ಮೂರಲ್ಲಿ 30 ಮೀಟರ್ ರಸ್ತೆ ವಿಸ್ತರಣೆಗೆ ವಿರೋಧ

molakalmuru Road wide Oppose Highway
Published on

ಮೊಳಕಾಲ್ಮೂರು: ಪಟ್ಟಣದ ಮುಖ್ಯರಸ್ತೆಯನ್ನು 20 ಮೀಟರ್ ಮಾತ್ರ ವಿಸ್ತರಿಸಬೇಕು ಎಂದು ಆಗ್ರಹಿಸಿ ರಸ್ತೆ ಪಕ್ಕದ ಮನೆ, ಅಂಗಡಿ ಮಾಲೀಕರು ಪಪಂ ಅದ್ಯಕ್ಷರಿಗೆ ಗುರುವಾರ ಮನವಿ ಪತ್ರ ಸಲ್ಲಿಸಿದರು.

5 ಕಿ.ಮೀ. ರಸ್ತೆ ಅಭಿವೃದ್ಧಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ 30 ಕೋಟಿ ರೂ. ಮಂಜೂರು ಮಾಡಿದೆ. ಕಾಮಗಾರಿ ಶುರುವಾಗಿರುವ ಬೆನ್ನಲ್ಲೇ ಪಪಂ ಆಡಳಿತ ತುರ್ತು ಸಭೆ ನಡೆಸಿ, 20ಮೀಟರ್ ಬದಲು 30 ಮೀಟರ್‌ಗೆ ತೀರ್ಮಾನ ಕೈಗೊಂಡಿರುವುದು ಏಕಪಕ್ಷೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಸ್ತೆ ಬದಿ ಮನೆ ಮತ್ತು ಅಂಗಡಿ ಹೊಂದಿ ಕಳೆದ 50 ವರ್ಷಗಳಿಂದ ಅನುಭವಿಸುತ್ತ ಬಂದಿದ್ದೇವೆ.

ಸಾರ್ವಜನಿಕರ ಅಭಿಪ್ರಾಯ ಪರಿಗಣಿಸದೆ ಏಕಾಏಕಿ 30 ಅಡಿಗೆ ವಿಸ್ತರಿಸುವ ಔಚಿತ್ಯ ಏನಿತ್ತು ಎಂದು ಪ್ರಶ್ನಿಸಿದರು. ಸಭೆ ನಡಾವಳಿ ಸಡಿಲಿಸಿ 20 ಮೀಟರ್ ಅಗಲೀಕರಣಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಿದರು.

ಎಂ.ಎಸ್.ಮಾರ್ಕಂಡೇಯ, ರಮೇಶ್, ವಿ.ಟಿ.ಉಮೇಶ್, ಜೆ.ಆರ್. ಶ್ರೀನಿವಾಸ, ಗುರುರಾಜಣ್ಣ, ನಿಂಗಣ್ಣ, ಕೆ.ವಿ.ಶಿವಣ್ಣ, ಚಂದ್ರಶೇಖರ, ದಯಾನಂದ್, ಬಸಣ್ಣ, ಎಂ.ಮಹಾಂತೇಶ, ಪುರುಷೋತ್ತಮ, ಕೆ.ಪಿ.ಗೋಪಾಲಕೃಷ್ಣ, ಬಿ.ಎಸ್.ಶಿವಕುಮಾರ್, ಪ್ರಸನ್ನಕುಮಾರ್, ಸೈಯದ್ ಅಕ್ರಮ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net