ಕರ್ನಾಟಕದ ಪಾಲಿಗೆ ಬಿಜೆಪಿ ಅದೃಷ್ಟ ರೇಖೆ: ಸಚಿವ ಆರ್.ಅಶೋಕ್ ಹೇಳಿಕೆ

Ashok
Published on

ಮೊಳಕಾಲ್ಮೂರು: ಕಾಂಗ್ರೆಸ್‌ನ ಪರಿಸ್ಥಿತಿ ಮನೆಯೊಂದು ಮೂರು ಬಾಗಿಲಾಗಿದೆ. ಅಧಿಕಾರಕ್ಕಾಗಿ ಜನೋತ್ಸವ ನಡೆಸುವ ಸಂಸ್ಕೃತಿ ನಮ್ಮದಲ್ಲ. ನುಡಿದಂತೆ ನಡೆಯುವಲ್ಲಿ ಬಿಜೆಪಿ ಬದ್ಧತೆ ಇಟ್ಟುಕೊಂಡಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.

ಪಟ್ಟಣದಲ್ಲಿ ಬುಧವಾರ ತಾಲೂಕು ಆಡಳಿತ ಸೌಧವನ್ನು ಉದ್ಘಾಟಿಸಿ ಮಾತನಾಡಿ, ಕಾಂಗ್ರೆಸ್ ಸರ್ಕಾರವಿದ್ದಾಗ ಬರ ಕಾಡುತ್ತದೆ. ಅದೇ ಬಿಜೆಪಿ ಅಧಿಕಾರ ನಡೆಸುವಾಗ ಸಮೃದ್ಧ ಮಳೆ, ಬೆಳೆ ಆಗುತ್ತದೆ. ಜತೆಗೆ ಆಂಧ್ರ, ತಮಿಳುನಾಡಿನ ನೀರಿನ ಜಗಳ ಕೂಡ ಉದ್ಭವಿಸುವುದಿಲ್ಲ. ಕರ್ನಾಟಕದ ಪಾಲಿಗೆ ಬಿಜೆಪಿ ಅದೃಷ್ಟ ರೇಖೆ ಇದ್ದಂತೆ. ಮುಂಬರುವ ಚುನಾವಣೆಯಲ್ಲಿ 150 ಸ್ಥಾನ ಗೆದ್ದು ಮತ್ತೊಮ್ಮೆ ಅಧಿಕಾರ ಪಡೆಯುತ್ತೇವೆ ಎಂದು ಸಚಿವ ಅಶೋಕ್ ವಿಶ್ವಾಸ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net