ನ್ಯಾಯಾಧೀಶರಿಂದ ಅನ್ನದಾನ

MLK Annadana.. Apr.. 9.
Published on

ಮೊಳಕಾಲ್ಮೂರು: ರಾಯಾಪುರ ಸಮೀಪದ ಸುಡುಗಾಡುಸಿದ್ಧರ ವಠಾರ, ಸಾರ್ವಜನಿಕ ಆಸ್ಪತ್ರೆ ಹಾಗೂ ವಿವಿಧೆಡೆ ಜೆಎಂಎಫ್‌ಸಿ ನ್ಯಾಯಾಧೀಶರಾದ ಎಸ್.ನಿರ್ಮಲಾ ಅವರು ಗುರುವಾರ ಭೇಟಿ ನೀಡಿ 500 ಬಡವರಿಗೆ ರೈಸ್‌ಬಾತ್ ಪ್ಯಾಕೇಟ್ ವಿತರಿಸಿದರು.

ಬಳಿಕ ಮಾತನಾಡಿ, ಕರೊನಾ ಎಫೆಕ್ಟ್‌ನಿಂದ ಸಣ್ಣಪುಟ್ಟ ವ್ಯಾಪಾರಸ್ಥರಿಗೆ, ಬಡವರಿಗೆ ತೊಂದರೆಯಾಗಿದೆ. ಇಂತಹ ಸಂದರ್ಭದಲ್ಲಿ ಅವರ ಕಷ್ಟಕ್ಕೆ ಬೇರೆಯವರು ನೆರವಾಗಲು ಸ್ಫೂರ್ತಿ ಆಗಲಿ ಎಂದು ಸ್ವಂತ ಹಣದಲ್ಲಿ ಒಪ್ಪತ್ತಿನ ಊಟ ನೀಡಿದ್ದೇನೆ ಎಂದರು.

ತಹಸೀಲ್ದಾರ್ ಎಂ.ಬಸವರಾಜ್ ಮಾತನಾಡಿ, ಕರೊನಾ ನಿಯಂತ್ರಣಕ್ಕೆ ಸರ್ಕಾರ ಕೈಗೊಂಡಿರುವ ಕೆಲ ನಿಬಂಧನೆಗಳು ಜನಸಮುದಾಯದ ಹಿತಕ್ಕಾಗಿ ಎಂಬುದನ್ನು ಅರಿತು ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ವಕೀಲರ ಸಂಘದ ಅಧ್ಯಕ್ಷ ಪಿ.ಪಾಪಯ್ಯ, ಕಾರ್ಯದರ್ಶಿ ಜಿ.ಮಂಜುನಾಥ, ಮಾಜಿ ಅಧ್ಯಕ್ಷ ಪಿ.ಜಿ.ವಸಂತಕುಮಾರ್, ಪಿಎಸ್‌ಐ ಬಸವರಾಜ್, ಸಮಾಜ ಕಲ್ಯಾಣಾಧಿಕಾರಿ ಪ್ರೇಮನಾಥ್, ವಕೀಲರಾದ ಅನಂತಮೂರ್ತಿ, ಕುಮಾರಪ್ಪ, ಆನಂದ್, ಶ್ರೀನಿವಾಸ, ಶಮಿವುಲ್ಲಾ, ಹನುಮಂತರಡ್ಡಿ, ಶಂಕ್ರಪ್ಪ, ಎ.ಕೆ.ತಿಮ್ಮಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net