ಸಮಾಜದ ಶಾಂತಿ ಕಾಪಾಡಲು ಸಹಕರಿಸಿ

mlk shanti.. sabe.. Feb.9
Published on

ಮೊಳಕಾಲ್ಮೂರು: ಸಮಾಜಘಾತಕ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುವ ಕಿಡಿಗೇಡಿಗಳ ಹೆಡೆಮುರಿ ಕಟ್ಟಲು ಇಲಾಖೆ ಸಿದ್ಧವಿದೆ ಎಂದು ಸಿಪಿಐ ಗೋಪಾಲನಾಯ್ಕ ಎಚ್ಚರಿಕೆ ನೀಡಿದರು.

ಪಟ್ಟಣದ ಪೊಲೀಸ್ ಕಚೇರಿ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ನಿಗದಿತ ಸಮಯ ಪರಿಪಾಲನೆ ಮತ್ತು ಕಾನೂನು ಬಾಹಿರ ಚಟುವಟಿಕೆ ತಡೆ ಕುರಿತ ಬಾರ್ ಆ್ಯಂಡ್ ರೆಸ್ಟೋರೆಂಟ್, ಹೋಟೆಲ್, ಲಾಡ್ಜಸ್ ಮಾಲೀಕರ ಸಭೆಯಲ್ಲಿ ಮಾತನಾಡಿ, ಸಮಾಜದ ಶಾಂತಿ ಕಾಪಾಡುವುದು ಇಲಾಖೆ ಕರ್ತವ್ಯ. ಇದಕ್ಕೆ ತಾವೆಲ್ಲರೂ ಸಹಕಾರ ನೀಡಬೇಕು ಎಂದು ಕೋರಿದರು.

ಇಲಾಖೆ ಹಾಗೂ ಕಾನೂನು ನಿಯಮದ ಪ್ರಕಾರ ನಿಮ್ಮ ವ್ಯಾಪಾರ ವಹಿವಾಟು ನಡೆಸಬೇಕು. ನಿಮ್ಮ ಅಂಗಡಿಗಳಿಗೆ ಬರುವ ಸಾರ್ವಜನಿಕರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಇದು ಜಿಲ್ಲಾ ಪೊಲೀಸ್ ಇಲಾಖೆ ಆದೇಶ. ಇದನ್ನು ಮೀರಿ ನಡೆದರೆ ಶಿಸ್ತುಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪಿಎಸ್‌ಐ ಬಸವರಾಜ್ ಮಾತನಾಡಿ, ಪ್ರತಿ ನಾಗರಿಕನ ರಕ್ಷಣೆ ಪೊಲೀಸರ ಜವಾಬ್ದಾರಿಯಾಗಿದೆ. ಹೀಗಾಗಿ ಎಲ್ಲಿಯೇ ಯಾವುದೇ ರೀತಿ ಅಹಿತಕರ ಘಟನೆ ನಡೆದರೂ ತಕ್ಷಣ ಠಾಣೆಗೆ ಸುದ್ದಿ ಮುಟ್ಟಿಸಬೇಕು. ಮುಂದಿನ ಕ್ರಮವನ್ನು ನಾವು ಕೈಗೊಳ್ಳುತ್ತೇವೆ ಎಂದರು.

ವ್ಯವಸ್ಥಾಪಕರಾದ ಜೆ.ಎಂ.ಮಂಜಣ್ಣ, ನಾಗರಾಜ್, ರಮೇಶ್, ಪ್ರಸನ್ನ ಬಾಬು, ಪ್ರಕಾಶ್, ಶ್ರೀನಿವಾಸ, ಶಶಿಕುಮಾರ, ವೆಂಕಟೇಶ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net