ಮೊಳಕಾಲ್ಮೂರಲ್ಲಿ ಕರ್ಫ್ಯೂಗೆ ಜನ ಬೆಂಬಲ

MLK JANATHA 24
Published on

ಮೊಳಕಾಲ್ಮೂರು: ಜನತಾ ಕರ್ಫ್ಯೂಗೆ ಪಟ್ಟಣ ಸಂಪೂರ್ಣ ಬಂದಾಗಿತ್ತು. ಜನರು ಕಾರ್ಯ ಚಟುವಟಿಕೆಗೆ ಬ್ರೇಕ್ ಹಾಕಿ ಬೆಂಬಲ ಸೂಚಿಸಿದರು.

ಬೆಳಗ್ಗೆ ಅಗತ್ಯ ವಸ್ತು ಖರೀದಿಸಿದ ಸಾರ್ವಜನಿಕರು ಗಂಟೆ 8 ಆಗುತ್ತಿದ್ದಂತೆ ಮನೆ ಸೇರಿದರು. ವ್ಯಾಪಾರಸ್ಥರು ಸ್ವಯಂ ಪ್ರೇರಿತವಾಗಿ ಅಂಗಡಿ ಬಾಗಿಲು ತೆಗೆಯದೆ ಕರ್ಫ್ಯೂಗೆ ಬೆಂಬಲ ಸೂಚಿಸಿದ್ದರು. ವಾಹನಗಳು ರಸ್ತೆಗಿಳಿಯಲಿಲ್ಲ. ಜನಸಂದಣಿಯ ಪ್ರಮುಖ ಪ್ರದೇಶಗಳು ಬಿಕೋ ಎನ್ನುತ್ತಿದ್ದವು.

ತಾಲೂಕಿನಲ್ಲಿ ಅತಿ ಹೆಚ್ಚು ಮದುವೆಗಳು ನಡೆದಿರುವ ಹಿನ್ನೆಲೆಯಲ್ಲಿ ಸಂಸಾರ ಸಮೇತ ಬೈಕ್‌ಗಳಲ್ಲಿ ಓಡಾಡುವವರ ಸಂಖ್ಯೆ ತುಸು ಜಾಸ್ತಿಯಾಗಿದ್ದು ಮನಗಂಡ ಪೊಲೀಸರು ಆಗಾಗ ಕರ್ಫ್ಯೂ ಜಾರಿಯಲ್ಲಿದೆ, ತಿರುಗಾಡಬೇಡಿ ಎಂದು ತಿಳಿವಳಿಕೆ ಹೇಳುತ್ತಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net