

ಮೊಳಕಾಲ್ಮೂರು: ಮಹಾಮಾರಿ ಕರೊನಾ ವೈರಸ್ ತಡೆಗಾಗಿ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದ ಜನತಾ ಕರ್ಫ್ಯೂಗೆ ತಾಲೂಕಿನಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು.
ನಿತ್ಯ ಗಿಜಿಗುಡುತ್ತಿದ್ದ ಪಟ್ಟಣದ ಮುಖ್ಯರಸ್ತೆ, ವೃತ್ತಗಳೆಲ್ಲವೂ ವಾಹನ, ಜನ ಸಂಚಾರವಿಲ್ಲದೆ ಬಿಕೋ ಎನ್ನುತ್ತಿದ್ದವು. ಬಸ್ ನಿಲ್ದಾಣ, ಆಟೋ ಸ್ಟಾೃಂಡ್ ಬಡಣಗುಡುತ್ತಿದ್ದವು. ಬಟ್ಟೆ, ಕಿರಾಣಿ ಅಂಗಡಿಗಳೆಲ್ಲವೂ ಬಂದ್ ಆಗಿದ್ದವು. ಹಾಲು, ಪತ್ರಿಕೆ, ಔಷಧ, ಆಸ್ಪತ್ರೆ ಸೇವೆ ಲಭ್ಯ ಇದ್ದವು.