ನಿಷ್ಠಾವಂತ ಕಾರ್ಯಕರ್ತರೇ ಬಿಜೆಪಿ ಶಕ್ತಿ

mlk bjp.. jan.. 13..
Published on

ಮೊಳಕಾಲ್ಮೂರು: ಅಧಿಕಾರಕ್ಕೆ ಆಸೆ ಪಡದೆ ಪಕ್ಷ ವಹಿಸುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವ ನಿಷ್ಠಾವಂತ ಕಾರ್ಯಕರ್ತರಿಂದ ಮಾತ್ರ ಬಿಜೆಪಿ ಬಲವರ್ಧನೆ ಸಾಧ್ಯ ಎಂದು ನಿಕಟ ಪೂರ್ವ ಜಿಲ್ಲಾಧ್ಯಕ್ಷ ಕೆ.ಎಸ್.ನವೀನ್ ಹೇಳಿದರು.

ಪಟ್ಟಣದ ಶಿವಸದನದಲ್ಲಿ ಸೋಮವಾರ ನಡೆದ ಬಿಜೆಪಿ ಮಂಡಲ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿ, ಬಿಜೆಪಿ ಸರ್ವ ಜಾತಿ, ಧರ್ಮದ ತವರು. ಇದರ ತತ್ವಸಿದ್ಧಾಂತ ಒಪ್ಪಿ ಕೆಲಸ ಮಾಡುವವರಿಗೆ ಯಾವ ಸ್ಥಾನಮಾನಗಳ ಅಗತ್ಯ ಇರುವುದಿಲ್ಲ ಎಂದರು.

ರಾಷ್ಟ್ರದ ಹಿತ ಕಾಪಾಡುವ ಪ್ರತಿ ಭಾರತೀಯನಿಗೂ ಸಾಮಾಜಿಕ ನ್ಯಾಯಕೊಡಿಸಬೇಕೆಂದು ಪಣ ತೊಟ್ಟಿರುವ ಪ್ರಧಾನಿ ನರೇಂದ್ರ ಮೋದಿ ಆಡಳಿತ ವೈಖರಿ ಸಹಿಸಿಕೊಳ್ಳಲು ಪ್ರತಿಪಕ್ಷಳಿಗೆ ಆಗುತ್ತಿಲ್ಲ ಎಂದು ದೂರಿದರು.

ಪ್ರಧಾನ ಕಾರ್ಯದರ್ಶಿ ಜಯಪಾಲಯ್ಯ ಮಾತನಾಡಿ, ಸಿಎಎ ಕುರಿತು ಜನರಲ್ಲಿ ಪ್ರತಿಪಕ್ಷಗಳು ಅಪಪ್ರಚಾರ ಮಾಡುತ್ತಿದ್ದವೆ. ಕಾರ್ಯಕರ್ತರು ಇದರ ತಡೆಗೆ ಮುಂದಾಗಬೇಕು ಎಂದರು.

ಆರೋಗ್ಯ ಸಚಿವ ಶ್ರೀರಾಮುಲು ಮಾತನಾಡಿ, ವಿಪಕ್ಷಗಳು ಟೀಕಿಸುವ ಮೊದಲು ಪೌರತ್ವ ತಿದ್ದುಪಡಿ ಕಾಯ್ದೆ ನಿಜ ಸಂಗತಿ ತಿಳಿದುಕೊಳ್ಳಬೇಕು ಎಂದು ತಿಳಿಸಿದರು.

ಮಂಡಲ ನೂತನ ಅಧ್ಯಕ್ಷ ಡಾ.ಮಂಜುನಾಥ್ ಅಧಿಕಾರ ಸ್ವೀಕಾರ ಮಾಡಿದರು. ಜಿಲ್ಲಾಧ್ಯಕ್ಷ ಮುರಳಿ ಯಾದವ್, ಮಂಡಲ ಮಾಜಿ ಅಧ್ಯಕ್ಷ ಟಿ.ರೇವಣ್ಣ, ಜಿ.ಎಂ.ಸುರೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net