

ಮೊಳಕಾಲ್ಮೂರು: ತಾಲೂಕಿನಲ್ಲಿ ಮುಸ್ಲಿಮರು ತಮ್ಮ ತಮ್ಮ ಮನೆಗಳಲ್ಲಿ ಕುಟುಂಬದ ಸದಸ್ಯರೊಂದಿಗೆ ರಂಜಾನ್ ಪ್ರಾರ್ಥನೆ ಸಲ್ಲಿಸಿ ಸರಳವಾಗಿ ಹಬ್ಬ ಆಚರಿಸಿದರು.
ಕರೊನಾ ವೈರಸ್ ಹತೋಟಿಗೆ ತರಲು ಸರ್ಕಾರ ಜಾರಿಗೊಳಿಸಿರುವ ಲಾಕ್‌ಡೌನ್ ಆದೇಶದಿಂದ ಮುಸ್ಲಿಮರು ಪರಸ್ಪರ ಅಂತರ ಕಾಯ್ದುಕೊಂಡು ಮನೆಯಲ್ಲೇ ಪ್ರಾರ್ಥನೆ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಎಸ್.ಖಾದರ್ ಬಾಷಾ, ಮಾನವೀಯತೆ ಬದುಕಿನ ಅಡಿಪಾಯವಾಗಿರುವ ಕುರಾನ್ ಗ್ರಂಥವು ನೈತಿಕತೆ ಮೌಲ್ಯ ಸಾರುತ್ತದೆ. ಒಂದು ತಿಂಗಳು ದೇವರ ಸ್ಮರಣೆಯಲ್ಲಿ ಉಪವಾಸ ಮಾಡಲಾಗುತ್ತದೆ. ಇದು ಸಹಬಾಳ್ವೆ ವೃದ್ಧಿಸುತ್ತದೆ ಎಂದರು.