ಹನ್ನಿ ಮಾಸ್ಟರ್ ನಿಧನ

MLK NIDHANA 17
Published on

ಮೊಳಕಾಲ್ಮೂರು: ಟ್ಯೂಷನ್ ಮಾಸ್ಟರ್ ಎಂದೇ ಚಿರಪರಿಚಿತರಾಗಿದ್ದ ಪಟ್ಟಣದ ನಿವಾಸಿ ಹನ್ನಿ ಮಾಸ್ಟರ್ (87) ಶುಕ್ರವಾರ ಮಧ್ಯಾಹ್ನ ನಿಧನ ಹೊಂದಿದರು.

ಅಂಗವಿಕಲರಾಗಿದ್ದ ಮಾಸ್ಟರ್ ಅವಿವಾಹಿತರಾಗಿದ್ದರು. ಕಳೆದ 60 ವರ್ಷಗಳಿಂದ ಊರಿನ ಬಡ ಮಕ್ಕಳು ಕೊಟ್ಟಷ್ಟು ಹಣ ಪಡೆದು ಟ್ಯೂಷನ್ ಮಾಡುತ್ತಿದ್ದರು. ಶನಿವಾರ ಮಧ್ಯಾಹ್ನ ಪಟ್ಟಣದ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ಜರುಗಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net