ಕೂಲಿ ಕಾರ್ಮಿಕರಿಗೆ ಆಹಾರದ ಕಿಟ್ ವಿತರಣೆ

mlk kit.. vi.. Apr.. 25..
Published on

ಮೊಳಕಾಲ್ಮೂರು: ಲಾಕ್‌ಡೌನ್ ಮತ್ತು ರಂಜಾನ್ ಹಬ್ಬದ ಪ್ರಯುಕ್ತ ಮೊಳಕಾಲ್ಮೂರಿನ ಎಸ್‌ಆರ್‌ಜೆ ಬಸ್ ಮಾಲೀಕರು 3500 ಕೂಲಿ ಕಾರ್ಮಿಕ ಕುಟುಂಬಗಳಿಗೆ ಆಹಾರದ ಕಿಟ್ ವಿತರಿಸಿದರು.

ಬೆಂಗಳೂರು, ಮೊಳಕಾಲ್ಮೂರು, ಚಳ್ಳಕೆರೆ ಹಾಗೂ ಆಂಧ್ರದ ರಾಯದುರ್ಗ, ಕಣೇಕಲ್ ಮಾರ್ಗದ ಎಸ್‌ಆರ್‌ಜೆ ಬಸ್ ಶಾಖೆ ಕೇಂದ್ರಗಳಲ್ಲಿ ಕೆಲಸ ಮಾಡುವ ಕಾರ್ಮಿಕರು, ವಾಹನ ಚಾಲಕರು, ಕ್ಲೀನರ್ ಹಾಗೂ ನಿರ್ಗತಿಕರಿಗೆ ತಲಾ 4000 ರೂ. ಮೌಲ್ಯದ ಆಹಾರ ಧಾನ್ಯದ ಕಿಟ್ ನೀಡಿದರು.

ಸಂಕಷ್ಟದಲ್ಲಿರುವ ಕಾರ್ಮಿಕರಿಗೆ ಕೈಲಾದ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದ್ದು, ನಮಗೆ ಈ ಕಾರ್ಯದಿಂದ ತೃಪ್ತಿ ಸಿಕ್ಕಿದೆ ಎಂದು ಎಸ್‌ಆರ್‌ಜೆ ಬಸ್, ಜೆ.ಕೆ. ರೈಸ್ ಮಿಲ್ ಮಾಲೀಕರಾದ ಸೈಯದ್ ಜಿಲಾನಿ, ಸೈಯದ್ ದಸ್ತಗಿರಿ, ಸೈಯದ್ ಗೌಸ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net