ಟ್ಯಾಕ್ಸಿ ಚಾಲಕರಿಂದ ಊಟ ವಿತರಣೆ

MLK KIT 10
Published on

ಮೊಳಕಾಲ್ಮೂರು: ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ, ಟ್ಯಾಕ್ಸಿ, ಕಾರು, ಬೈಕ್‌ನಲ್ಲಿ ಸಂಚರಿಸುವವರಿಗೆ ಸ್ಥಳೀಯ ಚಾಲಕರ ಟ್ರೇಡ್ ಯೂನಿಯನ್ ಸಂಘದಿಂದ ಮೂರು ದಿನಗಳ ಊಟದ ಪ್ಯಾಕೇಟ್ ವಿತರಿಸಲಾಯಿತು.

ಸಂಘದ ಅಧ್ಯಕ್ಷ ಕೆ.ಪಿ.ಗಿರೀಶ್ ನೇತೃತ್ವದಲ್ಲಿ ಚಾಲಕರು ವೈಯಕ್ತಿಕವಾಗಿ ವಂತಿಗೆ ಸಂಗ್ರಹಿಸಿ ಪ್ರತಿ ದಿನ ಊಟ ತಯಾರಿಸಿ ವಿತರಿಸಿದರು.

ಸಂಘದ ಉಪಾಧ್ಯಕ್ಷರಾದ ತಿಪ್ಪೇಸ್ವಾಮಿ, ಸೈಯದ್ ಸಾದತ್, ಪ್ರಧಾನ ಕಾರ್ಯದರ್ಶಿ ಗಂಗಣ್ಣ, ಪದಾಧಿಕಾರಿಗಳಾದ ವಿ.ಎಂ.ಮಂಜುನಾಥ, ಶ್ರೀನಿವಾಸ್, ಅನಿಲ್ ಕುಮಾರ್, ಬಸವರಾಜ್, ರಾಘವೇಂದ್ರ, ಮಂಜಣ್ಣ, ಜೈರಾಮ್, ಅಶೋಕ್, ಸಂದೀಪ್, ಹಾಗೂ ಪ್ರಶಾಂತ, ವಿಜಯ್, ಪ್ರದೀಪ, ದೇವರಾಜ್, ಧರ್ಮೇಂದ್ರ, ನವೀನ್, ದಿವಾಕರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net