ಬಿತ್ತನೆ ಬೀಜ ವಿತರಣೆಗೆ ನಿಬಂಧನ ಸಲ್ಲ

MLK VITHARANE 03
Published on

ಮೊಳಕಾಲ್ಮೂರು: ರೈತರಿಗೆ ಸರ್ಕಾರದ ಯೋಜನೆಗಳು ಸಮರ್ಪಕವಾಗಿ ಪೂರೈಕೆಯಾಗಬೇಕು ಎಂದು ಜಿಪಂ ಸದಸ್ಯ ಡಾ.ಯೋಗೇಶ್ ಬಾಬು ಹೇಳಿದರು.

ಇಲ್ಲಿನ ಕೃಷಿ ಕಚೇರಿ ಆವರಣದಲ್ಲಿ ಬುಧವಾರ ಇಲಾಖೆ ವತಿಯಿಂದ ಸಬ್ಸಿಡಿ ದರದಲ್ಲಿ ರೈತರಿಗೆ ಶೇಂಗಾ ವಿತರಿಸಿ ಮಾತನಾಡಿ, ತಾಲೂಕಿನಲ್ಲಿ ಶೇಂಗಾ ಪ್ರಧಾನ ಬೆಳೆಯಾಗಿದೆ. 25 ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡುವ ವಾಡಿಕೆ ಇದೆ ಎಂದರು.

ಪ್ರಸಕ್ತ ವರ್ಷದಿಂದ ಸಬ್ಸಿಡಿ ದರದಲ್ಲಿ ವಿತರಿಸುವ ಬಿತ್ತನೆ ಬೀಜವನ್ನು ಮುಂದಿನ ಮೂರು ವರ್ಷದ ವರೆಗೆ ನೀಡುವುದಿಲ್ಲ ಎಂಬ ನಿಬಂಧನೆ ರೈತರ ಪಾಲಿಗೆ ಮುಳುವಾಗಲಿದೆ. ಯಥಾ ಸ್ಥಿತಿ ಕಾಪಾಡುವುದೇ ಸೂಕ್ತ. ಗುಣಮಟ್ಟ ಬೀಜದ ಬಗ್ಗೆ ಕೃಷಿ ಅಧಿಕಾರಿಗಳು ಜಾಗೃತಿ ವಹಿಸಬೇಕು ಎಂದರು.

ಕೃಷಿ ಅಧಿಕಾರಿ ಡಾ.ಆರ್.ಅಶೋಕ್ ಮಾತನಾಡಿ, ಉತ್ತಮ ತಳಿಯ ಬಿತ್ತನೆ ಬೀಜ ಬಂದಿದೆ. ರೈತರು ಆತಂಕ ಪಡುವ ಅಗತ್ಯತೆ ಇಲ್ಲ. ಆಂಧ್ರ ಗಡಿ ಭಾಗವಾಗಿರುವ ಕಾರಣ ಕೆಲ ರೈತರು ತಮ್ಮ ಜಮೀನು ಹೆಸರಿನಲ್ಲಿ ಖರೀದಿಸಿದ ಬಿತ್ತನೆ ಬೀಜವನ್ನು ಆಂಧ್ರದಲ್ಲಿ ಸಂಬಂಧಿಕರಿಗೆ ನೀಡುತ್ತಾರೆ ಎಂಬ ದೂರಿದ್ದು, ಇದಕ್ಕೆ ಆಸ್ಪದ ಕೊಡಬಾರದು ಎಂದು ತಿಳಿಸಿದರು.

ತಾಪಂ ಅಧ್ಯಕ್ಷೆ ಜಿ.ಬೋರಮ್ಮ, ಕೃಷಿ ಅಧಿಕಾರಿ ರಂಗಸ್ವಾಮಿ, ತಾಂತ್ರಿಕ ಅಧಿಕಾರಿ ಹೇಮಂತ್‌ಕುಮಾರ್, ಸಿಬ್ಬಂದಿ ಮಲ್ಲಿಕಾರ್ಜುನ, ನಾಗರಾಜ್, ನುಂಕೇಶ್, ನಿರಂಜನಮೂರ್ತಿ, ರೈತರಾದ ಟಿ.ಎಸ್.ಪಾಲಯ್ಯ, ಬಸವರಾಜ್, ಸುರೇಶ್, ಗೋವಿಂದಪ್ಪ, ಶಿವಕುಮಾರ್, ಗೋಪಾಲಪ್ಪ, ಶರತ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net