ಬೆಂಕಿ ಅವಘಡ, ಮೇವು ಭಸ್ಮ

mlk benki.. Feb.. 18..
Published on

ಮೊಳಕಾಲ್ಮೂರು: ತಾಲೂಕಿನ ಕೋನಾಪುರ ಬಳಿ ಮಂಗಳವಾರ ವಿದ್ಯುತ್ ತಂತಿ ತಗುಲಿ ಟ್ರ್ಯಾಕ್ಟರ್‌ನಲ್ಲಿದ್ದ ಸಾಗಿಸುತ್ತಿದ್ದ ಜೋಳದ ಸೊಪ್ಪೆ ಸುಟ್ಟು ಹೋಗಿದ್ದು, ಚಾಲಕ ಸಹಿತ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಹನುಮಂತಪ್ಪ ಅವರಿಗೆ ಸೇರಿದ ಟ್ರ್ಯಾಕ್ಟರ್‌ನಲ್ಲಿ ನಾಗಸಮುದ್ರದಿಂದ ಕೋನಾಪುರಕ್ಕೆ ಸೊಪ್ಪೆ ಸಾಗಿಸುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಬೆಂಕಿ ಹತ್ತಿದ್ದನ್ನು ಗಮನಿಸಿದ ಗ್ರಾಮಸ್ಥರು ತಕ್ಷಣ ಟ್ರಾೃಕ್ಟರ್ ನಿಲ್ಲಿಸಿ ನೀರೆರಚಿ ಬೆಂಕಿ ನಂದಿಸಿದರು. ಅಗ್ನಿಶಾಮಕ ಸಿಬ್ಬಂದಿಯೂ ಕೈ ಜೋಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net