ಗುಡಿಸಲಿಗೆ ಆಕಸ್ಮಿಕ ಬೆಂಕಿ

MLK BENKI 12
Published on

ಮೊಳಕಾಲ್ಮೂರು: ತಾಲೂಕಿನ ರಾಯಾಪುರ ಸಮೀಪದ ಕಾಕಪಾಲಯ್ಯನಹಟ್ಟಿಯಲ್ಲಿ ಗುರುವಾರ ಬೆಳಗ್ಗೆ ಪ್ರಕಾಶ ಎಂಬುವವರ ಗುಡಿಸಲು ಮನೆ ಆಕಸ್ಮಿಕ ಬೆಂಕಿಗೆ ಆಹುತಿಯಾಗಿದೆ. ಗುಡಿಸಲಿನಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

ಮನೆಯಲ್ಲಿದ್ದ ದವಸ, ಧಾನ್ಯ ಸುಟ್ಟು ಕರಕಲಾಗಿವೆ. ಮನೆಯಲ್ಲಿ ಮಲಗಿದ್ದ ಮಹಿಳೆಯನ್ನು ತಕ್ಷಣ ಹೊರಗೆ ಕರೆತರಲಾಯಿತು ಎಂದು ಅಗ್ನಿಶಾಮಕ ಠಾಣಾಧಿಕಾರಿ ಎಸ್.ಸುಬಾನ್ ಸಾಬ್ ತಿಳಿಸಿದರು. ಸಿಬ್ಬಂದಿ ಶ್ರೀಧರ್ ಬಡಿಗೇರ, ವೆಂಕಟೇಶ್ ನಾಯ್ಕ, ಶಿವರಾಮ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net