ಕೋನಸಾಗರ ಕ್ಲಿನಿಕ್ ಮೇಲೆ ದಾಳಿ; ನಕಲಿ ವೈದ್ಯನ ಸೆರೆ

molakalmuru, fake doctor, arrested
Published on

ಮೊಳಕಾಲ್ಮೂರು: ತಾಲೂಕಿನ ಕೋನಸಾಗರದ ಕ್ಲಿನಿಕ್‌ವೊಂದರ ಮೇಲೆ ಗುರುವಾರ ದಾಳಿ ನಡೆಸಿದ ತಹಸೀಲ್ದಾರ್ ಮಲ್ಲಿಕಾರ್ಜುನ ನೇತೃತ್ವದ ತಂಡವು ನಕಲಿ ವೈದ್ಯನನ್ನು ಬಂಧಿಸಿ, ಔಷಧ ವಶಪಡಿಸಿಕೊಂಡಿದ್ದಾರೆ.

ಆಂಧ್ರ ಮೂಲದ ವೀರೇಶ್ ಬಂಧಿತ. ಸಾರ್ವಜನಿಕರ ದೂರು ಆಧರಿಸಿ ಮಧ್ಯಾಹ್ನ ಕ್ಲಿನಿಕ್ ಹಾಗೂ ಮನೆ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಅವಧಿ ಮುಗಿದಿದ್ದ ಔಷಧ ವಶಪಡಿಸಿಕೊಂಡರು. ಪಿಯುಸಿ ಪೂರೈಸಿರುವ ಈತ ಎರಡು ತಿಂಗಳ ಮಗು ಸೇರಿ ಎಲ್ಲ ವಯಸ್ಸಿನವರಿಗೂ ಚಿಕಿತ್ಸೆ ನೀಡುತ್ತಿದ್ದ ಎಂದು ದೂರಲಾಗಿದೆ. ಟಿಎಚ್‌ಒ ಡಾ.ಸುಧಾ ಮಾತನಾಡಿ, ತಾಲೂಕಿನಲ್ಲಿ ನಕಲಿ ವೈದ್ಯರನ್ನು ಪತ್ತೆ ಹಚ್ಚಿ ಕಾನೂನು ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ಹೇಳಿದರು. ಪೊಲೀಸ್ ಸಿಬ್ಬಂದಿ ಆನಂದ್ ನಾಯ್ಕ, ಕುಬೇರ, ಗಿರೀಶ್, ಜಾಹೀರ್, ಬಿಲ್ ಕಲೆಕ್ಟರ್ ತಿಪ್ಪೇಸ್ವಾಮಿ ಇತರರಿದ್ದರು.

ಆರೋಗ್ಯ ಸುಧಾರಣೆಗೆ ಸಾರ್ವಜನಿಕ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೇವೆ ಕಲ್ಪಿಸಲಾಗಿದೆ. ಜನರು ಅರಿವಿಲ್ಲದ ನಕಲಿ ವೈದ್ಯರ ಬಳಿ ತೆರಳುವುದು ಒಳ್ಳೆಯದಲ್ಲ. ಆಂಧ್ರ ಮೂಲದ ಕೆಲವರು ನಕಲಿ ಸರ್ಟಿಫಿಕೇಟ್ ಪಡೆದು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕ್ಲಿನಿಕ್ ನಡೆಸುತ್ತಿದ್ದಾರೆ ಎಂಬ ದೂರಿದೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು.
- ಮಲ್ಲಿಕಾರ್ಜುನ ತಹಸೀಲ್ದಾರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net