ಅನ್ನಸಂತರ್ಪಣೆ ಕೇಂದ್ರ ಶೀಘ್ರ ಆರಂಭ

MLK DANYA 08
Published on

ಮೊಳಕಾಲ್ಮೂರು: ಕ್ಷೇತ್ರದ ಬಡ ಜನರ ಹಸಿವು ನೀಗಿಸಲು ಪಟ್ಟಣದಲ್ಲಿ ಶಾಶ್ವತವಾಗಿ ಅನ್ನಸಂತರ್ಪಣೆ ಕೆಂದ್ರ ತೆರೆಯುವ ದೂರದೃಷ್ಠಿ ಚಿಂತನೆ ಜಿಲ್ಲಾ ಉಸ್ತುವಾರಿ ಸಚಿವರು ಹೊಂದಿದ್ದಾರೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಡಾ.ಮಂಜುನಾಥ್ ತಿಳಿಸಿದರು.

ತಾಪಂ ಆವರಣದಲ್ಲಿ 81 ಆಟೋ ಚಾಲಕರು, 15 ಮಂದಿ ಹಮಾಲರಿಗೆ ಆಹಾರ ಧಾನ್ಯದ ಕಿಟ್ ವಿತರಿಸಿ ಮಾತನಾಡಿ, ಅತ್ಯಂತ ಹಿಂದಳಿದ ಕ್ಷೇತ್ರದಲ್ಲಿ ಕೂಲಿ ಕಾರ್ಮಿಕ ಕುಟುಂಬಗಳೇ ಹೆಚ್ಚಿದ್ದಾರೆ. ಈ ಕಾರಣಕ್ಕೆ ಇವರ ಉಪವಾಸ ನೀಗಿಸುವ ಕಾರ್ಯ ಸಚಿವರಿಂದ ಶೀಘ್ರ ಆಗಲಿದೆ ಎಂಬ ವಿಶ್ವಾಸ ಇದೆ ಎಂದು ಹೇಳಿದರು.

ಸಚಿವರ ಆಪ್ತ ಸಹಾಯಕ ಪಾಪೇಶ್ ನಾಯಕ, ಪಕ್ಷದ ನಗರ ಘಟಕದ ಅಧ್ಯಕ್ಷ ಶಾಂತರಾಮ್, ಮುಖಂಡರಾದ ಹಾನಗಲ್ ಪರಮೆಶ್ವರಪ್ಪ, ಮಂಜುನಾಥ, ಸಂಜೀವಮೂರ್ತಿ, ಭೀಮಣ್ಣ, ಸಿದ್ದಣ್ಣ, ರಘು, ವಿಜಯ್, ಆಟೋ ಚಾಲಕರ ಸಂಘದ ಅಧ್ಯಕ್ಷ ರಾಮಕೃಷ್ಣ, ಉಪಾಧ್ಯಕ್ಷ ಮಾರನಾಯಕ, ಕಾರ್ಯದರ್ಶಿ ರಾಜಣ್ಣ, ಪಾಪಣ್ಣ, ಓಬಣ್ಣ, ರಾಮಕೃಷ್ಣ, ಭೊಮ್ಮಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net