ಹಟ್ಟಿ ತಿಪ್ಪೇಶ ಭಕ್ತರಿಂದ ಉಚಿತ ಮಜ್ಜಿಗೆ

MLK UCHITHA 12
Published on

ಮೊಳಕಾಲ್ಮೂರು: ಖಾಸಗಿ ಬಸ್ ನಿಲ್ದಾಣದಲ್ಲಿ ನಾಯಕನಹಟ್ಟಿ ತಿಪ್ಪೇಸ್ವಾಮಿ ಭಕ್ತರು ಉಚಿತ ಮಜ್ಜಿಗೆ ವಿತರಣೆ ಕಾರ್ಯ ಆರಂಭಿಸಿದರು.

ತಿಪ್ಪೇಸ್ವಾಮಿ ಜಾತ್ರೆ ದಿನವಾದ ಗುರುವಾರ ಸೇವಾ ಕಾರ್ಯಕ್ಕೆ ಸಿದ್ದಯ್ಯನಕೋಟೆ ಮಠದ ಶ್ರೀ ಬಸವಲಿಂಗ ಸ್ವಾಮೀಜಿ ಅವರಿಂದ ಚಾಲನೆ ಕೊಡಿಸಿದರು.

ಎ.ಎಸ್.ಗೋಪಾಲಕೃಷ್ಣ, ಶ್ಯಾಮಲಾಬಾಯಿ ಅವರು ಈ ಸೇವಾ ಕಾರ್ಯ ಕೈಗೊಂಡಿದ್ದು, ನಾಯಕನಹಟ್ಟಿ ತಿಪ್ಪೇಶನ ರಥೋತ್ಸವ ದಿನದಿಂದ ಬೇಸಿಗೆ ಕೊನೆವರೆಗೂ ಮಜ್ಜಿಗೆ ವಿತರಣೆ ಮಾಡಲಾಗುತ್ತದೆ.

ಮುಖಂಡರಾದ ಬಿ.ಜಿ.ಸೂರ್ಯನಾರಾಯಣ, ವೇಣುಗೋಪಾಲ್, ಸಾಕ್ರೆ ರಾಮಕೃಷ್ಣ, ವಾಂಜ್ರೆ ಶಿವಾಜಿ, ನರಸಿಂಗರಾವ್, ಪಪಂ ಸದಸ್ಯೆ ಶುಭಾ, ವೆಂಕಟೇಶ್, ವಿನಯ್ ಕುಮಾರ್, ಕಾಂತರಾಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net