ಸೌಲಭ್ಯ ವಿತರಣೆಯಲ್ಲಿ ತಾರತಮ್ಯ ಸಲ್ಲ

Molakalmuru, Department of Agriculture, Farmer Women's Day,
Published on

ಮೊಳಕಾಲ್ಮೂರು: ಸಬ್ಸಿಡಿ ನೆಪದ ತಾರತಮ್ಯ ನೀತಿ ಕೈಬಿಟ್ಟು ಎಲ್ಲ ವರ್ಗದ ರೈತರಿಗೂ ಕೃಷಿ ಉಪಕರಣಗಳು ಸಿಗುವಂತಾಗಬೇಕು ಎಂದು ಪ್ರಗತಿಪರ ರೈತ ಮಹಿಳೆ ಸುಮಂಗಲಮ್ಮ ಸರ್ಕಾರಕ್ಕೆ ಒತ್ತಾಯಿಸಿದರು.

ತಾಲೂಕು ಕೃಷಿ ಇಲಾಖೆ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರೈತ ಮಹಿಳೆ ದಿನಾಚರಣೆ ಹಾಗೂ ತಾಡಪಲ್ ವಿತರಣೆಗೆ ಫಲಾನುಭವಿಗಳ ಆಯ್ಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೃಷಿ ಪ್ರಧಾನವಾದ ನಮ್ಮ ದೇಶವು ಆರ್ಥಿಕ ಸಬಲೀಕರಣ ಹೊಂದಲು ಅನ್ನದಾತನಿಗೆ ಸರ್ಕಾರ ಕೊಡುತ್ತಿರುವ ಬೀಜ, ಗೊಬ್ಬರ, ಕೃಷಿ ಉಪಕರಣಗಳಲ್ಲಿ ಇಬ್ಬಗೆಯ ನೀತಿ ಕೈಬಿಟ್ಟು ಎಲ್ಲ ರೈತರ ಸಮಗ್ರ ಕೃಷಿ ಚಟುವಟಿಕೆಗೆ ಉತ್ತೇಜನ ನೀಡಿದರೆ ಸಾಮಾಜಿಕ ನ್ಯಾಯ ಕೊಡಿಸಿದಂತಾಗುತ್ತದೆ ಎಂದರು.

ರೈತ ಸಂಘದ ತಾಲೂಕು ಅಧ್ಯಕ್ಷ ಬೆಳಗಲ್ ಈಶ್ವರಯ್ಯ ಸ್ವಾಮಿ ಮಾತನಾಡಿ, ರಾಜಕಾರಣಿಗಳು, ಜನಪ್ರತಿನಿಧಿಗಳು ಅಧಿಕಾರಕ್ಕೆ ಬರುತ್ತಿದ್ದಂತೆ ರೈತರ ಬದುಕು ಹಸನಾಗಿಸುವ ಭರವಸೆ ಮರೆಯುತ್ತಿದ್ದಾರೆ ಎಂದು ದೂರಿದರು.

ಕೃಷಿ ಅಧಿಕಾರಿ ಗಿರೀಶ್, ತಾಪಂ ಅಧ್ಯಕ್ಷೆ ಜಿ.ಬೋರಮ್ಮ, ಕನಕ ಶಿವಮೂರ್ತಿ, ಅಧಿಕಾರಿಗಳಾದ ನಿರಂಜನಮೂರ್ತಿ, ರಾಜಣ್ಣ, ಮಲ್ಲಿಕಾರ್ಜುನ, ನಾಗರಾಜ್, ನುಂಕೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net