1500 ಮಂದಿಗೆ ಆಹಾರದ ಕಿಟ್ ವಿತರಣೆ

MLK KIT 23
Published on

ಮೊಳಕಾಲ್ಮೂರು: ಕರೊನಾ ವಾರಿಯರ್ಸ್ ಹಾಗೂ ವಿವಿಧ ಸಮುದಾಯದ 1500ಕ್ಕೂ ಹೆಚ್ಚು ಕಾರ್ಮಿಕ ಕುಟುಂಬಳಿಗೆ 10 ಲಕ್ಷ ರೂ. ವೆಚ್ಚದಲ್ಲಿ ಆಹಾರ ದಾನ್ಯ ಕಿಟ್‌ಗಳನ್ನ ತಾಪಂ ಮಾಜಿ ಅಧ್ಯಕ್ಷ, ರಾಂಪುರದ ಎಂ.ಡಿ.ಮಂಜುನಾಥ್ ವಿತರಣೆ ಮಾಡಿದ್ದಾರೆ.

ತಾಲೂಕಿನ ವಿಠಲಾಪುರದಲ್ಲಿ ಅಂಗವಿಕಲರಿಗೆ ಆಹಾರ ಕಿಟ್ ವಿತರಿಸಿ ಮಾತನಾಡಿದ ಅವರು, ಲಾಕ್‌ಡೌನ್ ಹಿನ್ನೆಲೆಯಲ್ಲಿ ದೇವಸಮುದ್ರ, ನಾಗಸಮುದ್ರ, ಅಶೋಕ ಸಿದ್ದಾಪುರ, ತಮ್ಮೇನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಬರುವ 60ಕ್ಕೂ ಹೆಚ್ಚು ಗ್ರಾಮಗಳ ಜನರ ಆರೋಗ್ಯ ಸುರಕ್ಷತೆಗಾಗಿ ಶ್ರಮಿಸುತ್ತಿರುವ 50 ಮಂದಿ ಆಶಾ ಕಾರ್ಯಕರ್ತೆಯರಿಗೆ ಆಹಾರ ಧಾನ್ಯದ ಕಿಟ್ ವಿತರಿಸಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net