ಪತ್ರಕರ್ತರಿಗೆ ಆರೋಗ್ಯ ವಿಮೆ ನೀಡಲು ಮನವಿ

MLK MANAVI 13
Published on

ಮೊಳಕಾಲ್ಮೂರು: ಕರೊನಾ ವೈರಸ್ ನಿಯಂತ್ರಣಕ್ಕೆ ಹಗಲಿರುಳು ಶ್ರಮಿಸುತ್ತಿರುವ ಮಾಧ್ಯಮದವರಿಗೆ ಆರೋಗ್ಯ ವಿಮೆ, ಸೂಕ್ತ ಪರಿಹಾರ ಸೌಲಭ್ಯ ಕಲ್ಪಿಸಬೇಕೆಂದು ಒತ್ತಾಯಿಸಿ ಪತ್ರಕರ್ತರು ಸೋಮವಾರ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ದೃಶ್ಯ ಮತ್ತು ಮುದ್ರಣ ಮಾಧ್ಯಮದ ಪತ್ರಕರ್ತರು, ಏಜೆಂಟರು, ವಿತರಕರು ಮಹಾಮಾರಿ ಕರೊನಾ ಭೀತಿಯಲ್ಲೂ ಜನರಿಗೆ ಸುದ್ದಿ ಮುಟ್ಟಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರಿಗೆ ನೀಡಿರುವಂತೆ ತಮಗೂ ಸೌಲಭ್ಯ ನೀಡಬೇಕೆಂದು ಮನವಿ ಮಾಡಿದರು.

ಪತ್ರಕರ್ತರಾದ ಪಾತಯ್ಯ, ಕೆ.ಕೆಂಚಪ್ಪ, ಕೊಂಡ್ಲಹಳ್ಳಿ ಮಹದೇವ, ಡಿ.ಎನ್.ಗೋವಿಂದಪ್ಪ, ಎಸ್.ರಾಜಶೇಖರ, ರಾಮಕೃಷ್ಣ, ಕೊಂಡ್ಲಹಳ್ಳಿ ಜಯಪ್ರಕಾಶ್, ಮಹಾಂತೇಶ, ಕೆ.ಪಿ.ಬಸವರಾಜ್, ಜಿ.ಬಿ.ಮಲ್ಲಿಕಾರ್ಜುನ, ಗಂಗಾಧರ, ಗೋಪಾಲ, ಚಂದ್ರಶೇಖರ, ಮಲ್ಲಿಕಾರ್ಜುನ, ಬಸವರಾಜ್, ತಿರುಮಲೇಶ, ನಂದೀಶ, ರುದ್ರೇಶ, ಚಂದ್ರಪ್ರಕಾಶ್, ರಾಮಚಂದ್ರ, ವೆಂಕಟೇಶ, ಅಜ್ಜಪ್ಪ, ಉಮೇಶ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net