

ಮೊಳಕಾಲ್ಮೂರು: ಕರೊನಾ ಸೋಂಕು ತಡೆಗೆ ತಾಲೂಕಿನ ದೇವಸಮುದ್ರ ಗ್ರಾಮ ಪಂಚಾಯಿತಿಯ ಉರ್ತಾಳ್ ಗ್ರಾಮದಲ್ಲಿ ಬುಧವಾರ, ಮನೆಗೊಂದು ಸೋಪು ವಿತರಿಸಿ ಶುಚಿತ್ವದ ಅರಿವು ಮೂಡಿಸಲಾಯಿತು.
ಸೋಪು ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಇಒ ಪ್ರಕಾಶ್, ಶುಚಿತ್ವ ಕಾಪಾಡಿಕೊಂಡರೆ ರೋಗ ತಡೆ ಸಾಧ್ಯ ಎಂದರು.
ಕರೊನಾ ವೈರಸ್ ಶೀತ ಪ್ರದೇಶದಲ್ಲಿ ಹೆಚ್ಚಾಗಿ ಕಂಡು ಬರುತ್ತಿದ್ದು ಎಲ್ಲರೂ ಜಾಗೃತರಾಗಿರಬೇಕು, ಆದಷ್ಟು ಶೀತ ಪದಾರ್ಥಗಳ ಸೇವನೆ ಕಡಿಮೆ ಮಾಡುವುದು ಸೂಕ್ತ ಎಂದು ತಿಳಿಸಿದರು.
ತಾಲೂಕಿನ 16 ಗ್ರಾಪಂಗಳ ನಿಧಿಯಡಿ ಎಲ್ಲ ಗ್ರಾಮಗಳ ಅಂದಾಜು 27 ಸಾವಿರ ಕುಟುಂಬಕ್ಕೆ ಉಚಿತವಾಗಿ ಸೋಪು ವಿತರಿಸಲಾಗುವುದು ಎಂದರು.