

ಮೊಳಕಾಲ್ಮೂರು: ಕರೊನಾ ಎಫೆಕ್ಟ್‌ನಿಂದ ಭಿಕ್ಷುಕರು, ಅಲೆಮಾರಿಗಳು, ನಿರಾಶ್ರಿತರು ಮನೆ, ಮನೆಗೆ ಅಲೆಯಬಾರದು ಎಂದು ಅವರಿಗೆ ತಾತ್ಕಾಲಿಕ ಊಟದ ವ್ಯವಸ್ಥೆಗೆ ಸೂಕ್ತ ಕ್ರಮ ವಹಿಸಲಾಗಿದೆ ಎಂದು ತಹಸೀಲ್ದಾರ್ ಎಂ.ಬಸವರಾಜ್ ತಿಳಿಸಿದರು.
ಪಟ್ಟಣದ ಕೆಲವೆಡೆ ಬಯಲಿನಲ್ಲಿ ಗುಡಾರ ಹಾಕಿಕೊಂಡು ಜೀವನ ಸಾಗಿಸುತ್ತಿರುವ ನಿರ್ಗತಿಕ 5 ಕುಟುಂಬಗಳ 30 ಮಂದಿಗೆ 30 ಕೆಜಿ ಅಕ್ಕಿ ವಿತರಣೆ ಮಾಡಿ ಮಾತನಾಡಿದರು.
ಚಿಂದಿ ಆಯುವವರು ಬೀದಿ ಬೀದಿ ಸುತ್ತುವಂತಿಲ್ಲ. ನಿಮಗೆ ತಾತ್ಕಾಲಿಕವಾಗಿ ಊಟದ ವ್ಯವಸ್ಥೆ ಮಾಡಲಾಗುವುದು. ಇದ್ದ ಸ್ಥಳದಲ್ಲೇ ಇರಬೇಕು ಎಂದು ಸೂಚಿಸಿದರು.
ನಗರದ ಕೆಇಬಿ ವೃತ್ತದ ಸರ್ಕಾರಿ ಮೆಟ್ರಿಕ್‌ಪೂರ್ವ ಬಾಲಕರ ವಸತಿ ನಿಲಯದಲ್ಲಿ ತಾತ್ಕಾಲಿಕವಾಗಿ ವಸತಿ ವ್ಯವಸ್ಥೆ ಮಾಡಲಾಗಿದೆ. ನಿರ್ಗತಿಕರು ಇಲ್ಲಿ ನೆಲೆಗೊಳ್ಳಬೇಕು. ಇನ್ಮುಂದೆ ನಗರ, ಗ್ರಾಮೀಣ ಪ್ರದೇಶದಲ್ಲಿ ವಿನಾಕಾರಣ ತಿರುಗಾಡುವಂತಿಲ್ಲ ಎಂದು ಹೇಳಿದರು.
ತಾಪಂ ಇಒ ಪ್ರಕಾಶ್, ಸಮಾಜ ಕಲ್ಯಾಣಾಧಿಕಾರಿ ಟಿ.ಪ್ರೇಮನಾಥ, ಕಂದಾಯ ಅಧಿಕಾರಿ ಉಮೇಶ್, ಪಪಂ ಸದಸ್ಯರಾದ ತಿಪ್ಪೇಸ್ವಾಮಿ, ಲಕ್ಷ್ಮಣ ಇತರರಿದ್ದರು.