ಕರೊನಾ ಜಾಗೃತಿ ಪೊಲೀಸರಿಂದ ಬೈಕ್ ರ‌್ಯಾಲಿ

MLK RYALI 13
Published on

ಮೊಳಕಾಲ್ಮೂರು: ಕರೊನಾ ತಡೆಗೆ ಸುರಕ್ಷತಾ ಕ್ರಮಗಳನ್ನು ಅನುಸರಿಸುವಂತೆ ರಾಂಪುರ ಪೊಲೀಸರು ಠಾಣಾ ವ್ಯಾಪ್ತಿಯ ಹಳ್ಳಿಗಳಲ್ಲಿ ಸೋಮವಾರ ಬೈಕ್‌ರ‌್ಯಾಲಿ ನಡೆಸಿ ಜಾಗೃತಿ ಮೂಡಿಸಿದರು.

ರ‌್ಯಾಲಿಗೆ ಚಾಲನೆ ನೀಡಿದ ಸಿಪಿಐ ಗೋಪಾಲನಾಯ್ಕ ಮಾತನಾಡಿ, ಕರೊನಾ ವೈರಸ್ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಲಾಕ್‌ಡೌನ್ ಆದೇಶ ಹೊರಡಿಸಿದ್ದು ಎಲ್ಲರೂ ಪಾಲಿಸಬೇಕು. ಇದನ್ನು ಉಲ್ಲಂಘಿಸಿ ವಿನಾಕಾರಣ ತಿರುಗಾಡಿದರೆ ಅಂತವರ ವಾಹನ ಜಪ್ತಿ ಮಾಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಅನಾರೋಗ್ಯ, ಅಗತ್ಯ ಸೇವೆಗಳಿಗೆ ಮಾತ್ರ ಹೊರ ಬರಬೇಕು. ಜಗುಲಿ ಕಟ್ಟೆ, ದೇವಸ್ಥಾನ, ಗಲ್ಲಿಗಳಲ್ಲಿ ಗುಂಪು ಸೇರಿದರೆ ಶಿಸ್ತು ಕ್ರಮಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ರಾಂಪುರ, ಕೆರೆಪುರ, ತಿಮ್ಮಲಾಪುರ ಗ್ರಾಮಗಳಲ್ಲಿ ಕರೊನಾ ವೈರಸ್ ಕುರಿತು ಜಾಗೃತಿ ಮೂಡಿಸಲಾಯಿತು.

ಪಿಎಸ್‌ಐ ಗುಡ್ಡಪ್ಪ, ಎಎಸ್‌ಐಗಳಾದ ಚಂದ್ರಪ್ಪ, ರಾಮಲಿಂಗಪ್ಪ, ಧರಣೇಶಪ್ಪ, ಲೋಕೇಶ್, ಆನಂದ್, ವೀರಣ್ಣ, ಶಿವು, ಬಸವರಾಜ್, ಜ್ಯೋತಿಗೌಡ, ಪ್ರೇಮ್ ಕುಮಾರ್, ನಂದಕುಮಾರ್, ತಿಮ್ಮಪ್ಪ, ಗೋವಿಂದಪ್ಪ, ದೇವರಾಜ್ ಇತರರು ರ‌್ಯಾಲಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net