

ಮೊಳಕಾಲ್ಮೂರು: ಕರೊನಾ ಆತಂಕದ ಹಿನ್ನೆಲೆಯಲ್ಲಿ ರಸ್ತೆ ಬದಿಯ ಅಂಗಡಿಗಳನ್ನು ಬಂದ್ ಮಾಡುವಂತೆ ಪಪಂ ಮುಖ್ಯಾಧಿಕಾರಿ ಎಚ್.ಕಾಂತರಾಜ್ ನೇತೃತ್ವದಲ್ಲಿ ಅಧಿಕಾರಿಗಳು ಪಟ್ಟಣದಲ್ಲಿ ಶನಿವಾರ ಜಾಗೃತಿ ಮೂಡಿಸಿದರು.
ಗುಣಮಟ್ಟವಿಲ್ಲದ ಆಹಾರ ಪದಾರ್ಥ, ಕರಿದ ಎಣ್ಣೆ ಮರುಬಳಕೆ ಮಾಡುವುದು ತಪ್ಪು. ಸ್ವಚ್ಛತೆ ಇಲ್ಲದ ಆಹಾರ ಸೇವಿಸುವುದು ಆರೋಗ್ಯಕ್ಕೆ ಹಾನಿಕರ. ಮನೆ ಮತ್ತು ನೆರೆ ಹೊರೆಯಲ್ಲಿ ಸ್ವಚ್ಛತೆ ಕಾಪಾಡಬೇಕು ಎಂದು ಹೇಳಿದರು.
ಮಾಂಸ ಮಾರಾಟದ ಅಂಗಡಿಗಳು, ಫುಟ್‌ಪಾತ್ ಮೇಲೆ ತಿಂಡಿ ಮಾರಾಟ ಮಾರುವವರು ಮಾ.25ರ ವರೆಗೆ ತಾತ್ಕಾಲಿಕವಾಗಿ ರದ್ದು ಮಾಡಬೇಕು. ಇದಕ್ಕೂ ಮೀರಿ ಮಾರಾಟ ಕಂಡು ಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಡಿ.ಚಿದಾನಂದಪ್ಪ ಮಾತನಾಡಿ, ಕರೊನಾ ವೈರಸ್ ತಡೆಗೆ ಆರೋಗ್ಯ ಇಲಾಖೆ ಕೈಗೊಂಡಿರುವ ಪ್ರಚಾರ ಆಂದೋಲನದ ಮುನ್ನಚ್ಚರಿಕೆ ಕ್ರಮಗಳನ್ನು ಜನಸಮುದಾಯ ಅನುಸರಿಸಬೇಕು. ಗುಣಮಟ್ಟದ ಆಹಾರ ಪದಾರ್ಥ, ಶುದ್ಧ ನೀರು ಸೇವಿಸಬೇಕು ಎಂದು ಹೇಳಿದರು.