ಸುರಕ್ಷತಾ ಕ್ರಮದೊಂದಿಗೆ ಸ್ವಚ್ಛತೆ ಕೈಗೊಳ್ಳಿ

mlk vitarane.. mar.. 24.
Published on

ಮೊಳಕಾಲ್ಮೂರು: ಕರೊನಾ ವೈರಸ್ ಎಲ್ಲೆಡೆ ಹರಡುತ್ತಿರುವ ಕಾರಣ ನಿತ್ಯ ಸ್ವಚ್ಛತೆ ಕಾರ್ಯದಲ್ಲಿ ತೊಡಗುವ ಪೌರ ಕಾರ್ಮಿಕರು ಮುನ್ನಚ್ಚರಿಕೆ ಜತೆಗೆ ಸುರಕ್ಷತಾ ಕ್ರಮ ಅನುಸರಿಸಬೇಕು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಚ್. ಕಾಂತರಾಜ್ ಹೇಳಿದರು.

ನಗರದ ಶುಚಿತ್ವ ಕಾಪಾಡಲು 15ಕ್ಕೂ ಅಧಿಕ ಕಾರ್ಮಿಕರಿದ್ದಾರೆ. ಇವರ ಸುರಕ್ಷತೆಗಾಗಿ ಪಟ್ಟಣ ಪಂಚಾಯಿತಿಯಿಂದ ಮಾಸ್ಕ್, ಸೋಪು, ಟವೆಲ್, ಶೂ, ಸುರಕ್ಷತಾ ಸಮವಸ್ತ್ರಗಳನ್ನು ನೀಡಲಾಗಿದೆ ಎಂದು ತಿಳಿಸಿದರು.

ಕೆಲಸಕ್ಕೆ ಸಮಯ ನಿಗದಿ: ಪೌರಕಾರ್ಮಿಕರ ಆರೋಗ್ಯ ದೃಷ್ಟಿಯಿಂದ ಬೆಳಗ್ಗೆ 9.30ಕ್ಕೆ ಉಪಹಾರ, 10.30ರಿಂದ 2ಗಂಟೆ ತನಕ ಕೆಲಸಕ್ಕೆ ಹಾಜರಾಗಿ ನಂತರ ವಿರಾಮ ತೆಗೆದುಕೊಳ್ಳಲು ಸೂಚಿಸಲಾಗಿದೆ. ಆಗಾಗ ಆರೋಗ್ಯ ತಪಾಸಣೆ ನಡೆಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ನಿತ್ಯ ಶುಚಿತ್ವ ಕಾರ್ಯ ಮುಗಿದ ಬಳಿಕ ಮನೆಯಲ್ಲೇ ಇದ್ದು ಬಿಸಿ ನೀರಿನ ಸ್ನಾನ ಮಾಡಬೇಕು. ಕುಡಿಯಲು ಶುದ್ಧ ಆಹಾರ, ಬಿಸಿ ನೀರನ್ನೇ ಬಳಸಬೇಕು. ಹೆಚ್ಚಾಗಿ ಪೌಷ್ಟಿಕ ಆಹಾರ ಸೇವಿಸಬೇಕು. ಶುಚಿತ್ವದ ಬಗ್ಗೆ ಕಾಳಜಿ ವಹಿಸಬೇಕು ಎಂದು ಮುಖ್ಯಾಧಿಕಾರಿ ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net