ಜಿಲ್ಲೆ ಸಮಗ್ರ ಅಭಿವೃದ್ಧಿ ಬಿಜೆಪಿ ಗುರಿ

MLK SANMANA 14
Published on

ಮೊಳಕಾಲ್ಮೂರು: ಕೇಂದ್ರ ಹಾಗೂ ರಾಜ್ಯದಲ್ಲಿ ನಮ್ಮದೇ ಸರ್ಕಾರವಿದ್ದು, ಜಿಲ್ಲೆಯ ಸಮಗ್ರ ಅಭಿವೃದ್ಧಿಯೇ ನಮ್ಮ ಗುರಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ ಯಾದವ್ ಹೇಳಿದರು.

ತಾಲೂಕಿನ ಹಾನಗಲ್ ಪ್ರವಾಸಿ ಮಂದಿರದಲ್ಲಿ ಭಾನುವಾರ ತಾಲೂಕು ಯಾದವ ಜನ ಜಾಗೃತಿ ಸಂಘದಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಯಲುಸೀಮೆಯಲ್ಲಿ ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳುವಂತೆ ಸಚಿವರು ಹಾಗೂ ಸಂಸದರ ಮೂಲಕ ಸರ್ಕಾರದ ಮೇಲೆ ಒತ್ತಡ ಹಾಕಲಾಗುವುದು ಎಂದರು.

ನಿಷ್ಠೆಯಿಂದ ದುಡಿಯುವ ಕಾರ್ಯಕರ್ತನನ್ನು ಪಕ್ಷ ಯಾವತ್ತು ಕೈಬಿಡಲ್ಲ. ಇದಕ್ಕೆ ನಾನೇ ನಿದರ್ಶನ. ನನಗೆ ಪಕ್ಷ ದೊಡ್ಡ ಜವಾಬ್ದಾರಿ ನೀಡಿದ್ದು, ಅದಕ್ಕೆ ಎಲ್ಲಿಯೂ ಚ್ಯುತಿ ಬರದಂತೆ ದುಡಿಯುತ್ತೇನೆ ಎಂದು ತಿಳಿಸಿದರು.

ಜಿಲ್ಲಾ ಪ್ರದಾನ ಕಾರ್ಯದರ್ಶಿ ಜಯಪಾಲ ಮಾತನಾಡಿ, ಆತ್ಮ ನಿರ್ಭರ ಸ್ವಾವಲಂಭಿ ಭಾರತ ಯೋಜನೆ ಸರ್ವ ಸಮುದಾಯಕ್ಕೂ ಆಶಾಕಿರಣವಾಗಿದೆ ಎಂದರು.

ಯಾದವ ಜನ ಜಾಗೃತಿ ಸಂಘದ ತಾಲೂಕು ಅಧ್ಯಕ್ಷ ಜಿ.ಎ.ಜಯ್ಯಣ್ಣ, ಕಾರ್ಯದರ್ಶಿ ನರಸಿಂಹ, ಪಪಂ ಮಾಜಿ ಉಪಾಧ್ಯಕ್ಷರಾದ ಕೆ.ಎಂ.ಶಿವಮೂರ್ತಿ, ಬಸವರಾಜ್, ಡಿ.ಸಿ.ನಾಗರಾಜ್, ಟಿ.ಎಸ್.ಮೂರ್ತಿ, ಈರಣ್ಣ, ಶಿವಲಿಂಗ, ತಿಮ್ಮಣ್ಣ, ಕೃಷ್ಣಪ್ಪ, ಬಾಲರಾಜ್, ಧನಂಜಯ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net