ಕೇಂದ್ರದ ನಿರ್ಧಾರ ನ್ಯಾಯಸಮ್ಮತ

MLK JAGRUTHI 05
Published on

ಮೊಳಕಾಲ್ಮೂರು: ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ನಿರ್ಧಾರ ನ್ಯಾಯ ಸಮ್ಮತವಾಗಿದೆ ಎಂದು ಬಿಜೆಪಿ ಕಾರ್ಯಕರ್ತರು ಭಾನುವಾರ ಪಟ್ಟಣದ ಮನೆ ಮನೆ ತೆರಳಿ ಕಾಯ್ದೆ ಪರ ಪ್ರಚಾರ ನಡೆಸಿದರು.

ಮಂಡಲ ಅಧ್ಯಕ್ಷ ಡಾ.ಮಂಜುನಾಥ ಮಾತನಾಡಿ, 60 ವರ್ಷಗಳ ಕಾಲ ದೇಶವನ್ನಾಳಿದ ಕಾಂಗ್ರೆಸ್ ಹಾಗೂ ಮಿತ್ರಪಕ್ಷಗಳು ಅಲ್ಪಸಂಖ್ಯಾತರ ಹಿತ ಕಾಪಾಡದೆ ಅವರನ್ನು ಬರಿ ಓಟ್ ಬ್ಯಾಂಕಾಗಿ ಬಳಸಿಕೊಂಡಿವೆ. ಧರ್ಮದ ಆಧಾರದ ಮೇಲೆ ದೇಶ ವಿಭಜನೆಗೆ ಕಾಂಗ್ರೆಸ್ ಅವಕಾಶ ನೀಡದಿದ್ದರೆ ಈ ಮಸೂದೆ ಅಗತ್ಯವೇ ಇರಲಿಲ್ಲ ಎಂದರು.

ಬಿಜೆಪಿ ಮೊದಲಿನಿಂದಲೂ ರಾಷ್ಟ್ರೀಯ ಹಿತಾಸಕ್ತಿಯ ವಿಷಯಗಳನ್ನು ತನ್ನ ಪ್ರಣಾಳಿಕೆಯಲ್ಲಿ ಅಳವಡಿಸಿಕೊಂಡು ಅದರಂತೆ ನಡೆದುಕೊಳ್ಳುತ್ತಿದೆ. ಕೇಂದ್ರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ಉತ್ತಮ ನಿರ್ಧಾರ. ನಿಜ ಸಂಗತಿ ಅರಿಯದೆ ವಿರೋಧ ಪಕ್ಷಗಳು ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಾ ಜನರ ದಿಕ್ಕು ತಪ್ಪಿಸುತ್ತಿವೆ ಎಂದು ದೂರಿದರು.

ಪಪಂ ಸದಸ್ಯರಾದ ಸಿ.ಮಂಜುನಾಥ, ಶುಭಾ ಪೃಥ್ವಿರಾಜ್, ನಗರ ಅಧ್ಯಕ್ಷ ಶಾಂತಾರಾಮ್, ಕಿರಣ್ ಕುಮಾರ್ ಗಾಯಕ್ವಾಡ್, ಬಿ.ಅರ್ಜುನ, ಕೆ.ಆರ್.ರವಿಕುಮಾರ್, ವಕೀಲ ಶಿವಕುಮಾರ್, ಎಸ್.ಹರೀಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net