ಮೊಳಕಾಲ್ಮೂರಲ್ಲಿ ಪ್ರತಿಭಟನಾ ಮೆರವಣಿಗೆ

mlk muskara.. jan. 8.
Published on

ಮೊಳಕಾಲ್ಮೂರು: ಭಾರತ್ ಬಂದ್‌ಗೆ ಮೊಳಕಾಲ್ಮೂರಿನಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಎಲ್ಲೂ ಮುಷ್ಕರದ ಬಿಸಿ ಕಾಣಿಸಲಿಲ್ಲ. ವ್ಯಾಪಾರ ವಹಿವಾಟು, ಶಾಲಾ ಕಾಲೇಜುಗಳು, ಬಸ್, ಆಟೋ ಸಂಚಾರ ಎಂದಿನಂತಿತ್ತು.

ಬುಧವಾರ ಸಂತೆ ದಿನವಾದ್ದರಿಂದ ವಾಹನ ಮತ್ತು ಜನ ದಟ್ಟಣೆ ನಡುವೆಯೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೆ ಪಟ್ಟಣ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಬಂಡವಾಳ ಶಾಹಿಗಳ ಸಾಲ ಮನ್ನಾ ಮಾಡುವ ಕೇಂದ್ರ ಸರ್ಕಾರ ರೈತರೆಂದರೆ ಮೈಲಿ ದೂರ ಹೋಗುತ್ತದೆ. ಶೀಘ್ರವೇ ಸಾಲಮನ್ನಾ, ಬೆಳೆಗಳಿಗೆ ವೈಜ್ಞಾನಿಕ ಬೆಲೆ, ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸದಿದ್ದರೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ರೈತ ಸಂಘದ ಪದಾಧಿಕಾರಿಗಳಾದ ಬೇಡರಡ್ಡಿಹಳ್ಳಿ ಬಸವರಡ್ಡಿ, ಬೆಳಗಲ್ ಈಶ್ವರಯ್ಯಸ್ವಾಮಿ, ರವಿಕುಮಾರ್, ಡಿ.ಬಿ.ಕೃಷ್ಣಮೂರ್ತಿ, ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳಾದ ಜಾಫರ್, ಡಿ.ಎಂ.ಮಲಿಯಪ್ಪ, ಎಚ್.ಎ.ಮಾರಣ್ಣ, ಕೊಂಡಾಪುರ ಪರಮೇಶಿ, ಕೆ.ಟಿ.ನಾಗರಾಜ, ಡಿ.ಪೆನ್ನಯ್ಯ, ದಾನಸೂರನಾಯಕ, ನಾಗರಾಜ್, ತಿಮ್ಮಣ್ಣ, ಸಿ.ಮಂಜುನಾಥ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net