ಸುಳ್ಳಿನ ಗೋಪುರ ಬಿಜೆಪಿ ಸಾಧನೆ

mlk gosti.. Feb.. 12.
Published on

ಮೊಳಕಾಲ್ಮೂರು: ಜನವಿರೋಧಿ ನೀತಿ ಅನುಸರಿಸುತ್ತಾ ಅಭಿವೃದ್ಧಿ ಹೆಸರಲ್ಲಿ ದೇಶದ 135 ಕೋಟಿ ಪ್ರಜೆಗಳನ್ನು ಒತ್ತೆ ಇಟ್ಟು 91 ಲಕ್ಷ ಕೋಟಿ ಸಾಲ ಮಾಡಿರುವುದೇ ಕೇಂದ್ರದ ಬಿಜೆಪಿ ಸಾಧನೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಟೀಕಿಸಿದರು.

ಬಡತನ, ನಿರುದ್ಯೋಗ ಸಮಸ್ಯೆ ನಿವಾರಣೆ, ಬಡ ಜನರಿಗೆ ಪುಕ್ಕಟೆ ಹಣ, ಅಭಿವೃದ್ಧಿಯಲ್ಲಿ ವಿಶ್ವದಲ್ಲೇ ನಂಬರ್ ಒನ್ ದೇಶವನ್ನಾಗಿ ಮಾಡುತ್ತೇವೆಂದು ಮತದಾರರಿಗೆ ಸುಳ್ಳು ಭರವಸೆಕೊಟ್ಟು ಅಧಿಕಾರಕ್ಕೆ ಬಂದ ಕೇಂದ್ರ ಸರ್ಕಾರ ಆರು ವರ್ಷ ಕಳೆದರೂ ಪ್ರಗತಿ ಮಾತ್ರ ಶೂನ್ಯವಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ರಾಜ್ಯದಲ್ಲಿನ ಬರಗಾಲ, ಪ್ರವಾಹ ಪೀಡಿತ ಪ್ರದೇಶಕ್ಕೆ 1869 ಕೋಟಿ ರೂ. ಬಿಡುಗಡೆ ಮಾಡಿದ್ದು, ಇದು ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ. ಕೇಂದ್ರಕ್ಕೆ ರಾಜ್ಯದ ಪರ ಒಲವಿಲ್ಲ ಎಂದು ಅಪಾದಿಸಿದರು.

ಮುಖಂಡರಾದ ಸುಬಾನ್‌ಸಾಬ್, ಟಿ.ಕೆ.ಕಲೀಂವುಲ್ಲಾ, ತಿಪ್ಪೇಸ್ವಾಮಿ, ಭಕ್ತಪ್ರಹ್ಲಾದ, ಪ್ರಭುಸ್ವಾಮಿ, ಬಿ.ಕೆ.ಓಬಣ್ಣ, ನಾಗರಾಜ, ಸೂರನಾಯಕ, ರವೀಂದ್ರ, ಜೆ.ತಿಪ್ಪೇಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net