ಎಸ್ಸಿ ಪಟ್ಟಿಗೆ ಮಡಿವಾಳರನ್ನು ಸೇರಿಸಿ

MLK UTSAVA 22
Published on

ಮೊಳಕಾಲ್ಮೂರು: ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಹಿಂದುಳಿದಿರುವ ಮಡಿವಾಳ ಸಮಾಜವನ್ನು ಎಸ್ಸಿಗೆ ಸೇರಿಸಬೇಕು ಎಂದು ಅಥಣಿ ಪಾವನ ಕ್ಷೇತ್ರದ ಶ್ರೀ ಬಸವ ರಾಜೇಂದ್ರ ಸ್ವಾಮೀಜಿ ಆಗ್ರಹಿಸಿದರು.

ತಾಲೂಕಿನ ದೇವಸಮುದ್ರದಲ್ಲಿ ಶನಿವಾರ ಮಡಿವಾಳ ಸಮಾಜದಿಂದ ಆಯೋಜಿಸಿದ್ದ ಮಾಚಿದೇವ ಜಯಂತ್ಯುತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ದೇವರಾಜು ಅರಸು ಅವರು ಸಮಾಜವನ್ನು ಮೇಲೆತ್ತಲು ರಾಜಕೀಯ ಪ್ರಾತಿನಿಧ್ಯ ಕಲ್ಪಿಸಿ ಮೂಲೆ ಗುಂಪಾಗಿದ್ದ ಶೋಷಿತ ಸಮಾಜಕ್ಕೆ ಶಕ್ತಿ ತುಂಬಿದ್ದರು ಎಂದು ಸ್ಮರಿಸಿದರು.

ಶ್ರೀ ಬಸವ ಮಾಚೀದೇವ ಸ್ವಾಮೀಜಿ ಮಾತನಾಡಿ, ಶರಣರು ವಚನಗಳ ಮೂಲಕ ಸಮಾಜದ ಸುಧಾರಣೆಗೆ ಶ್ರಮಿಸಿದರು. ಮೌಢ್ಯಗಳನ್ನು ಕಟುವಾಗಿ ಟೀಕಿಸುತ್ತಾ ಸಂಸ್ಕಾರ, ಮೌಲ್ಯ ಬಿತ್ತುವ ಕೆಲಸ ಮಾಡಿದರು ಎಂದರು.

ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಚ್.ಟಿ.ನಾಗೀರೆಡ್ಡಿ ಮಾತನಾಡಿ, ಬಸವಾದಿ ಶರಣರ ಚಳವಳಿಯಲ್ಲಿ ಮಾಚಿದೇವರ ಕಾಯಕ ಸೇವೆ ಅಮೂಲ್ಯವಾದದ್ದು. ಸಾಹಿತ್ಯ ಗ್ರಂಥಗಳು, ಶಿವತತ್ವಗಳ ಮೂಲಕ ಉತ್ತಮ ನಾಡು ಕಟ್ಟುವ ಸಂದೇಶಗಳು ಸೂರ್ಯ ಚಂದ್ರರು ಇರುವ ತನಕ ಸಮಾಜಕ್ಕೆ ದಾರಿ ದೀಪವಾಗಿವೆ ಎಂದು ತಿಳಿಸಿದರು.

ತಾಪಂ ಸದಸ್ಯ ನರೇಂದ್ರಬಾಬು, ಮಡಿವಾಳ ಸಂಘದ ಅಧ್ಯಕ್ಷ ನಾಗರಾಜ್, ಮುಖಂಡರಾದ ರಾಜೇಶ್ವರಿ, ದೊಡ್ಡಲಿಂಗಣ್ಣ, ಹನುಮಂತಪ್ಪ, ಗಂಗಾರೆಡ್ಡಿ, ಗುರುಸ್ವಾಮಿ, ವೆಂಕಟೇಶ್, ಸುರೇಶ್, ಲಿಂಗಣ್ಣ, ಮಲ್ಲಿಕಾರ್ಜುನ, ಹನುಮಂತರಾಜು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net