ಮೊಳಕಾಲ್ಮೂರಲ್ಲಿ ಚಿರತೆ ಸೆರೆ

MLK CHIRATHE 16
Published on

ಮೊಳಕಾಲ್ಮೂರು: ಪಟ್ಟಣದ ಬಸವನ ಬೀದಿ ಬಡಾವಣೆ ಸಮೀಪ ಕಳೆದ ವಾರ ಕಾಣಿಸಿಕೊಂಡಿದ್ದ ಚಿರತೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಆಹಾರ ಹುಡುಕಿಕೊಂಡು ಊರಿನ ಪಕ್ಕದಲ್ಲೇ ಸುಳಿದಾಡುತ್ತಿದ್ದ ಚಿರತೆ ಗಮನಿಸಿದ್ದ ಗ್ರಾಮಸ್ಥರು ಅರಣ್ಯ ಇಲಾಖೆಗೆ ಸುದ್ದಿಮುಟ್ಟಿಸಿದ್ದರು. ಅರಣ್ಯ ಇಲಾಖೆ ಇರಿಸಿದ್ದ ಬೋನಿನಲ್ಲಿ ಚಿರತೆ ಬುಧವಾರ ರಾತ್ರಿ ಸೆರೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net