ಚೀಟಿ ಇಲ್ಲದಿದ್ರೆ ಔಷಧ ಕೊಡಬೇಡಿ

MLK SABE 28
Published on

ಮೊಳಕಾಲ್ಮೂರು: ಯಾವುದೇ ವ್ಯಕ್ತಿಗೆ ವೈದ್ಯರ ಚೀಟಿ ಇಲ್ಲದೆ ಕೆಮ್ಮು, ನೆಗಡಿ, ಜ್ವರ, ತಲೆನೋವಿಗೆ ಮಾತ್ರೆ, ಟಾನಿಕ್ ನೀಡುವಂತಿಲ್ಲ ಎಂದು ಮೆಡಿಕಲ್ ಸ್ಟೋರ್ ಮಾಲೀಕರಿಗೆ ತಾಲೂಕು ಆರೋಗ್ಯಾಧಿಕಾರಿ ಡಾ.ಪದ್ಮಾ ಸೂಚಿಸಿದ್ದಾರೆ.

ಪಟ್ಟಣದ ಸರ್ಕಾರಿ ಆಸ್ಪತ್ರೆ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಮೆಡಿಕಲ್ ಸ್ಟೋರ್ ಮಾಲೀಕರ ಸಭೆಯಲ್ಲಿ ಮಾತನಾಡಿ, ಕರೊನಾ ರೋಗ ತಡೆಗಟ್ಟಲು ಸರ್ವರ ಸಹಕಾರ ಅಗತ್ಯ ಎಂದು ತಿಳಿಸಿದರು.

ಜಿಲ್ಲಾ ಆರೋಗ್ಯ ಶಿಕ್ಷಣ ಮೇಲ್ವಿಚಾರಕ ಶ್ರೀನಿವಾಸ್, ವೈ.ತಿಪ್ಪೇಸ್ವಾಮಿ, ಡಾ.ರಾಘವೇಂದ್ರಬಾಬು, ಕಾರ್ಯಕ್ರಮ ಅಧಿಕಾರಿ ನವೀನ್, ಡಾ.ವಿನೋದ್ ಸರೋದೆ, ಡಾ.ಮಂಜುನಾಥ, ಡಾ.ಇದಾಯಿತ್, ಶ್ರೀಕಾಂತ್ ಗಾಯಕ್ವಾಡ್, ವಿಶುಕುಮಾರ್, ಪುಂಡಲೀಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net