ಮೋಕ್ಷ ಕಲ್ಯಾಣ ಕಾರ್ಯಕ್ರಮ

WhatsApp Image 2025-07-30 at 5.27.44 PM
Published on

ಧಾರವಾಡ: ತಾಲೂಕಿನ ಅಮ್ಮಿನಭಾವಿ ಗ್ರಾಮದ ಶ್ರೀ 1008 ನೇಮಿನಾಥ ಜಿನಾಲಯದಲ್ಲಿ ಆಯೋಜಿಸಿರುವ ಶ್ರೀ ಜಿನವಾಣಿ ಮಾತಾಜಿ ಅವರ 30ನೇ ಪಾವನವರ್ಷ ಯೋಗ ಕಾರ್ಯಕ್ರಮದ ಅಂಗವಾಗಿ ಜು. 31ರಂದು ಭಗವಾನ್ ಪಾರ್ಶ್ವನಾಥ ನಿರ್ವಹಣ ಮೋಕ್ಷ ಕಲ್ಯಾಣ ಕಾರ್ಯಕ್ರಮ ಆಯೋಜಿಸಲಾಗಿದೆ. ಅಂದು ಬೆಳಗಿನ ಜಾವ 4.30ಕ್ಕೆ ಪಂಚಾಮೃತ ಅಭಿಷೇಕ, ಮಂಡಳ ವಿಧಾನ ನಂತರ ಪಾರ್ಶ್ವನಾಥ ತೀರ್ಥಂಕರಗೆ ಪಂಚಾಮೃತ ಅಭಿಷೇಕ ಮತ್ತು ಮಹಾಶಾಂತಿ ಮಂತ್ರ ಜರುಗುಲಿದೆ. ಸಂಜೆ 6.30ರಿಂದ ಧರ್ಮಸಭೆ, ಪಾರ್ಶ್ವನಾಥ ತೀರ್ಥಂಕರ ಜೀವನ ಚರಿತ್ರೆ ಕುರಿತು ಮಕ್ಕಳಿಗೆ ಭಾಷಣ, ನಿಬಂಧ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ನಂತರ ಮಾತಾಜಿಯಿಂದ ಆಶೀರ್ವಚನ ನಡೆಯಲಿದೆ. ಭಕ್ತರಿಗೆ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದು ಟಿ.ಎಂ. ದೇಸಾಯಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net