

ಮಂಡ್ಯ: ಮೈಸೂರು ವಿಜಯನಗರ 4ನೇ ಹಂತದ ಬೋಗಾದಿ ರಸ್ತೆಯಲ್ಲಿರುವ ಮಾರ್ಲಿನ್ ಅಕ್ವಾಟಿಕ್ ಸೆಂಟರ್‌ನಲ್ಲಿ ಇತ್ತೀಚೆಗೆ ನಡೆದ ರಾಜ್ಯಮಟ್ಟದ ನಾನ್ ಮೆಡಲಿಸ್ಟ್ ಇನ್‌ವಿಟೇಶನಲ್ ಈಜು ಸ್ಪರ್ಧೆಯಲ್ಲಿ ನಗರದ ಕಲ್ಲಹಳ್ಳಿಯ ಮಾಂಡವ್ಯ ಹಿರಿಯ ಪ್ರಾಥಮಿಕ ಶಾಲೆ (ಆಂಗ್ಲ ಮಾಧ್ಯಮ)ಯ 5ನೇ ತರಗತಿ ವಿದ್ಯಾರ್ಥಿ ಮೋಹಿತ್ ಪಿ.ಶೆಟ್ಟಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ಮೋಹಿತ್ 50 ಮೀ. ಬಟರ್‌ಫ್ಲೈ ಈಜಿನಲ್ಲಿ ಬೆಳ್ಳಿ ಪದಕ, 50 ಮೀ. ಬ್ಯಾಕ್‌ಸ್ಟ್ರೀಕ್ ಈಜಿನಲ್ಲಿ ಮತ್ತೊಂದು ಬೆಳ್ಳಿ ಪದಕ ಹಾಗೂ 4*50 ಮೀ. ಫ್ರೀಸ್ಟೈಲ್ ರಿಲೇ ಸ್ಪರ್ಧೆಯಲ್ಲಿ ಬಂಗಾರ ಪದಕವನ್ನು ಗೆದ್ದು, ಶಾಲೆಯ ಹಿರಿಮೆ ಹೆಚ್ಚಿಸಿದ್ದಾರೆ. ವಿದ್ಯಾರ್ಥಿ ಸಾಧನೆಗಾಗಿ ಎಸ್.ಬಿ.ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಡಾ.ಮೀರಾ ಶಿವಲಿಂಗಯ್ಯ, ಶಾಲೆಯ ಆಡಳಿತ ಮಂಡಳಿ, ಶಿಕ್ಷಕರ ಅಭಿನಂದನೆ ಸಲ್ಲಿಸಿದ್ದಾರೆ.