ನಾಗೂರದಲ್ಲಿ ಮೊಹರಂ ಸಂಭ್ರಮ

IMG_20230729_161729
Published on

ಔರಾದ್: ನಾಗೂರ(ಎಂ) ಗ್ರಾಮದಲ್ಲಿ ಶನಿವಾರ ಮೊಹರಂ ಹಬ್ಬವನ್ನು ಸಡಗರ ಸಂಭ್ರಮ, ಭಕ್ತಿ ಭಾವದಿಂದ ಆಚರಿಸಲಾಯಿತು. ಇಡೀ ದಿನ ಪೈತ್ರಿ ಪದಗಳು, ಮೊಹರಂ ಪದಗಳು, ಸವಾಲ್ ಜವಾಬ್ ಹಾಡುಗಳ ಸಂಗೀತ ಕಾರ್ಯಕ್ರಮ ನಡೆದವು. ಗ್ಯಾನೋಬರಾವ್ ಪ್ರಭು ಅವರ `ಜಾಣಿ ಪೋತರಾಜ್' ಹಾಸ್ಯ ಪ್ರಸಂಗ ನಡೆಯಿತು.
ಲಾಲ್ ಸಾಹೇಬ್, ಮೌಲಾಲಿ, ಸಿದ್ದಸಾಬ್ ದೇವರನ್ನು ಪ್ರತಿಷ್ಠಾಪಿಸಲಾಗಿತ್ತು. ಒಂಬತ್ತು ದಿನದಿಂದ ನಿತ್ಯ ಜಾಗರಣೆ, ತಮಟೆ, ಭಜನೆ, ಕೋಲಾಟ ಸೇರಿ ವೈವಿಧ್ಯಮಯ ಕಾರ್ಯಕ್ರಮ ನಡೆದವು.
ಕೊನೇ ದಿನವಾದ ಶನಿವಾರ ಭಕ್ತರು ವಿಶೇಷ ಪೂಜೆ, ನೈವೇದ್ಯ, ಅಲಂಕಾರ ಮಾಡಿ ಅದ್ದೂರಿ ಮೆರವಣಿಗೆ ನಡೆಸಿದರು. ಧೂಪ, ಊದಬತ್ತಿ, ಹೂವು, ಹಣ್ಣು ತೆಂಗಿನ ಕಾಯಿ, ಹಣ ಕಾಣಿಕೆಯಾಗಿ ಅರ್ಪಿಸಿದರು.
ಪ್ರಮುಖರಾದ ಭೀಮರಾವ ಪೊಲೀಸ್ ಪಾಟೀಲ್, ಮಾರುತೆಪ್ಪ ಮಾಲಿಪಾಟೀಲ್, ಶಾಬುದ್ದಿನ್, ಸುನೀಲ್, ಬಾಬುರಾವ ಶೇರಿಕಾರ, ರಾಜಕುಮಾರ ಮಾನುರೆ, ಬಾಲಾಜಿ ಮೇತ್ರೆ, ರಾಜಕುಮಾರ, ನಾಗಶೆಟ್ಟಿ ಬಿರಾದಾರ, ಬಲಭೀಮ, ಅವೀನ್, ಸಂಗಪ್ಪ ಶೇರಿಕಾರ, ಕುಶಾಲರಾವ ಮಾನುರೆ, ರತಿಕಾಂತ, ನೌನಾಥ ಪಾಟೀಲ್, ಸುನೀಲ್ ಮಾಲಿಪಾಟೀಲ್, ಶಿವಶರಣಪ್ಪ ಬಿರಾದಾರ, ಚಂದ್ರಕಾAತ ಶೇರಿಕಾರ, ಮಲ್ಲಿಕಾರ್ಜುನ ಸೋರಳೆ, ಭರತ್, ಕಪೀಲ್, ಸುಭಾಷ ಟೇಲರ್, ಸತೀಶ, ಭಗವಂತ, ಆನಂದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net