

ಮಡಿಕೇರಿ: ಮೊಗೆರ ಸ್ಫೋರ್ಟ್ಸ್ ಕ್ಲಬ್ ಪಾಲಿಬೆಟ್ಟ ಇವರ ವತಿಯಿಂದ ಮೊಗೇರ ಸಮುದಾಯದವರಿಗೆ ಮೊಗೇರ ಪ್ರೀಮಿಯರ್ ಲೀಗ್ ಫುಟ್ಬಾಲ್ ಪಂದ್ಯಾಟ ಮಡಿಕೇರಿಯ ಜೂನಿಯರ್ ಕಾಲೇಜ್ ಮೈದಾನದಲ್ಲಿ ಶನಿವಾರ ಚಾಲನೆ ನೀಡಲಾಯಿತು.
ಪಂದ್ಯಾಟವನ್ನು ಮೊಗೆರ ಸಮಾಜದ ಜಿಲ್ಲಾ ಗೌರವ ಸಲಹೆಗಾರ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ನಿಕಟ ಪೂರ್ವ ಸದಸ್ಯ ಪಿ.ಎಂ.ರವಿ ಉದ್ಘಾಟಿಸಿದರು.
ಬಳಿಕ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಮೊಗೇರ ಸಮಾಜವು ಕ್ರೀಡೆಯಿಂದ ಸಂಘಟಿತರಾಗಿದ್ದಾರೆ. ಕ್ರೀಡೆಯೊಂದಿಗೆ ಎಲ್ಲಾ ಕ್ಷೇತ್ರದಲ್ಲಿ ಗುರುತಿಸುವಂತಾಗಬೇಕು. ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುವ ಮೂಲಕ ಸಮಾಜದ ಅಭಿವೃದ್ಧಿಗೆ ಪ್ರತಿಯೊಬ್ಬರು ಕೈಜೋಡಿಸಿಕೊಳ್ಳಬೇಕೆಂದರು.
ಸಮಾಜವು ಸಾಧನೆ ಮಾಡಿದವರನ್ನು ಗುರುತಿಸುತ್ತಿದ್ದು, ಕ್ರೀಡೆಯಲ್ಲು ಕೂಡ ಮೊಗೇರ ಸಮಾಜವು ದೊಡ್ಡ ಮಟ್ಟದ ಸಾಧನೆ ಮಾಡಿದೆ. ಫುಟ್ಬಾಲ್ ಕ್ರೀಡೆಯಲ್ಲಿ ನಮ್ಮ ಜನಾಂಗದ ಅನೇಕರು ರಾಜ್ಯ ಮತ್ತು ರಾಜ್ಯಮಟ್ಟದಲ್ಲಿ ಭಾಗವಹಿಸಿರುವುದು ಸಮಾಜಕ್ಕೆ ಹೆಮ್ಮೆ ಎಂದರು.
ವೇದಿಕೆಯಲ್ಲಿ ಮೊಗೆರ ಸಮಾಜದ ಜಿಲ್ಲಾಧ್ಯಕ್ಷ ಪಿ.ಬಿ.ಜನಾರ್ಧನ, ಮೊಗೇರ ಸಮಾಜದ ಹಿರಿಯ ಸದಸ್ಯ ಸೋಮಯ್ಯ ಹೆಬ್ಬಟ್ಟಗೇರಿ, ಪತ್ರಕರ್ತ ಕುಡೆಕಲ್ ಸಂತೋಷ್ ಮಾತನಾಡಿದರು. ಮೊಗೇರ ಸ್ಫೋರ್ಟ್ಸ್ ಕ್ಲಬ್‌ನ ಅಧ್ಯಕ್ಷ ವಿನೋದ್, ಕಾರ್ಯದರ್ಶಿ ಜನಾರ್ಧನ್, ಸಮಾಜದ ಪ್ರಮುಖರಾದ ವಿಜಯ್, ದಿನೇಶ್ ಉಪಸ್ಥಿತರಿದ್ದರು.