ಹೇಮಾ ಹೇಮಂತ್‌ರಾಜ್ ಮೋದೂರು ಗ್ರಾಪಂ ಅಧ್ಯಕ್ಷೆ

HUN-JULY-23-4(HEMA HEMANTHRAJ GP PRESIDENT)
ಹುಣಸೂರು ತಾಲೂಕು ಮೋದೂರು ಗ್ರಾಪಂ ನೂತನ ಅಧ್ಯಕ್ಷರಾಗಿ ಹೇಮಾ ಹೇಮಂತ್‌ರಾಜ್ ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷೆ ಮಣಿ, ಸದಸ್ಯರಾದ ಮಹದೇವಪ್ಪ, ಶೇಖರ್, ರಾಮಚಂದ್ರ, ಭಾಸ್ಕರ್, ಗೌರಮ್ಮ, ರಾಜೇಶ್ವರಿ ಇತರರು ಇದ್ದರು.
Published on

ಹುಣಸೂರು: ತಾಲೂಕಿನ ಮೋದೂರು ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಹೇಮಾ ಹೇಮಂತ್‌ರಾಜು ಅವಿರೋಧವಾಗಿ ಆಯ್ಕೆಯಾದರು.
ಗ್ರಾಪಂನ ಎರಡನೇ ಅವಧಿಯ ಅಧ್ಯಕ್ಷಗಾದಿಗೆ ವರ್ಷದ ಹಿಂದೆ ಆಯ್ಕೆಯಾಗಿದ್ದ ರಾಮಚಂದ್ರ ಅವರು ವೈಯಕ್ತಿಕ ಕಾರಣ ನೀಡಿ ಅಧ್ಯಕ್ಷ ಸ್ಥಾನಕ್ಕೆ ಇತ್ತೀಚಿಗೆ ರಾಜೀನಾಮೆ ನೀಡಿದ್ದರು. ಇದೀಗ ಉಳಿದಿರುವ 17 ತಿಂಗಳ ಅವಧಿಗೆ ಹೇಮಾ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಮಂಗಳವಾರ ಗ್ರಾಪಂ ಕಚೇರಿಯಲ್ಲಿ ಅಧ್ಯಕ್ಷಗಾದಿಗಾಗಿ ನಡೆದ ಚುನಾವಣೆಯಲ್ಲಿ ಹೇಮಾ ಹೇಮಂತ್‌ರಾಜ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ನೇತ್ರಾವತಿ ಘೋಷಿಸಿದರು. 8 ಸದಸ್ಯ ಬಲದ ಗ್ರಾಮ ಪಂಚಾಯಿತಿಯಲ್ಲಿ ಎಲ್ಲ ಸದಸ್ಯರೂ ಚುನಾವಣೆ ವೇಳೆ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net