ಮನೆಮನೆಗೆ ಮೋದಿ ಸಾಧನೆ ತಿಳಿಸಿ

07 yelandur 01
Published on

ಯಳಂದೂರು: ಕೇಂದ್ರ ಸರ್ಕಾರದ ಸಾಧನೆಯನ್ನು ಮನೆಮನೆಗಳಿಗೆ ತಲುಪಿಸಬೇಕು ಎಂದು ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ ಆರ್. ಸುಂದರ್ ಕಾರ್ಯಕರ್ತರಿಗೆ ಸಲಹೆ ನೀಡಿದರು.

ಭಾನುವಾರ ಪಟ್ಟಣದಲ್ಲಿ ಕರಪತ್ರ ಹಂಚುವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, 370ನೇ ವಿಧಿ ರದ್ಧತಿ, ಪೌರತ್ವ ತಿದ್ದಪಡಿ ಕಾಯ್ದೆ ವಿಧೇಯಕ, ರಾಮಮಂದಿರ ನಿರ್ಮಾಣಕ್ಕೆ ಚಾಲನೆ, ತ್ರಿವಳಿ ತಲಾಖ್‌ನಿಂದ ಮುಸ್ಲಿಂ ಮಹಿಳೆಯರಿಗೆ ಮುಕ್ತಿ ಸೇರಿದಂತೆ ಅನೇಕ ನಿರ್ಣಗಳನ್ನು ಕೇಂದ್ರ ಸರ್ಕಾರದ ಐತಿಹಾಸಿಕ ಸಾಧನೆ ಎಂದರು.

ಎಸ್‌ಸಿ ಮೋರ್ಚಾದ ಜಿಲ್ಲಾಧ್ಯಕ್ಷ ಕಿನಕಹಳ್ಳಿ ರಾಚಯ್ಯ ಮಾತನಾಡಿ, ಮೋದಿ ಇಂದು ವಿಶ್ವನಾಯಕರಾಗಿದ್ದರೆ, ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ನಾಡಿನ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಈ ಎಲ್ಲದರ ಬಗ್ಗೆಯೂ ಕರಪತ್ರದಲ್ಲಿ ಮಾಹಿತಿ ಇದ್ದು, ಕಾರ್ಯಕರ್ತರು ಪ್ರಾಮಾಣಿಕವಾಗಿ ಮನೆಮನೆಗೆ ತಲುಪಿಸಬೇಕು ಎಂದು ಸಲಹೆ ನೀಡಿದರು.

ಬಿಜೆಪಿ ಸಂಯೋಜಕರಾದ ಆರ್.ಬಾಲರಾಜು, ಪಿ.ವೃಷಬೇಂದ್ರಪ್ಪ, ನಾಗಶ್ರೀ ಪ್ರತಾಪ್, ಜಿಲ್ಲಾ ವಕ್ತಾರ ಉಮ್ಮತ್ತೂರು ನಾಗೇಶ್, ಮಂಡಲ ಅಧ್ಯಕ್ಷ ಮಹೇಶ್, ಮುಖಂಡರಾದ ವೈ.ಕೆ.ರಾಜು, ಕೆಂಪರಾಜು, ಅಗರ ರಾಜು, ಶಾಂತರಾಜು, ಚಂದ್ರಶೇಖರ್, ಕಿಟ್ಟಿ, ಸೂರ್ಯನಾರಾಯಣ, ಗುರುಲಿಂಗ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net