ಭಾರತ ವಿಶ್ವಮಾನ್ಯವಾಗಿಸಲು ಮೋದಿ ಶ್ರಮ ಅಪಾರ

kdr3 (5)
Published on

ಕಡೂರು: ಭಾರತವನ್ನು ವಿಶ್ವಮಾನ್ಯ ಮಾಡುವಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಶ್ರಮ ಅಪಾರ ಎಂದು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿಪ್ರಕಾಶ್ ಹೇಳಿದರು.

ದತ್ತಾತ್ರೇಯ ಬಡಾವಣೆಯ ಸಾಯಿ ಮಂದಿರ ಮತ್ತು ಉದ್ಯಾನವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ 75ನೇ ಜನ್ಮದಿನದ ಅಂಗವಾಗಿ ಸೇವಾ ಪಾಕ್ಷಿಕದ ಹಿನ್ನಲೆಯಲ್ಲಿ ಬಿಜೆಪಿ ಮಂಡಲದಿಂದ ಏರ್ಪಡಿಸಿದ್ದ ಸ್ವಚ್ಚತಾ ಅಭಿಯಾನದ ಮೂಲಕ ಶ್ರಮದಾನಕ್ಕೆ ಚಾಲನೆ ನೀಡಿ ಬಳಿಕ ಮಾತನಾಡಿದರು.

ಮೋದಿ ಅವರು ಪ್ರಧಾನಿಯಾದ ಬಳಿಕ ದೇಶದ ಜನರಿಗೆ ಉಚಿತವಾಗಿ ಕರೊನಾ ಲಸಿಕೆ, ಆಯುಷ್ಮಾನ್ ಭಾರತ, ಜನಧನ್, ಸಲ್‌ಭೀಮಾ, ನೇರ ನಗದು ವರ್ಗಾವಣೆ, ಸ್ವಚ್ಛ ಭಾರತ ಅಭಿಯಾನ, ಸ್ವಾವಲಂಬನೆಗಾಗಿ ಆತ್ಮನಿರ್ಭರ ಭಾರತ, ಮೇಕ್‌ಇನ್ ಇಂಡಿಯಾ, ಪಿಎಂ ಕಿಸಾನ್ ಮೂಲಕ ಕೋಟ್ಯಂತರ ರೈತರಿಗೆ ನೆರವು, ತ್ರಿವಳಿ ತಲಾಖ್ ಮತ್ತು 370ನೇ ವಿಧಿ ರದ್ದತಿ ಮೂಲಕ ಅಲ್ಪ ಸಂಖ್ಯಾತರಲ್ಲಿ ಭರವಸೆ, 80 ಕೋಟಿ ಕುಟುಂಬಗಳಿಗೆ ಉಚಿತ ಆಹಾರ ಧಾನ್ಯ ವಿತರಣೆ, ಬೇಟಿ ಬಚಾವೋ ಬೇಟಿ ಡಾವೋ, ಉಜ್ವಲಾ ಯೋಜನೆ ಮೂಲಕ ಮಹಿಳೆಯರಿಗೆ ಗೌರವ ಹೀಗೆ ದೇಶದ ಎಲ್ಲ ವರ್ಗದ ಜನರಿಗೂ ತಲುಪುವಂತೆ ಕಾರ್ಯಕ್ರಮ ರೂಪಿಸಿದ್ದಾರೆ ಎಂದರು.

ಶ್ರಮದಾನ ಬಳಿಕ ಸಸಿಗಳನ್ನು ನೆಡಲಾಯಿತು. ಪುರಸಭೆ ಉಪಾಧ್ಯಕ್ಷೆ ಮಂಜುಳಾ ಚಂದ್ರು, ಬಿಜೆಪಿ ಮಂಡಲ ಅಧ್ಯಕ್ಷ ಬಿ.ಪಿ.ದೇವಾನಂದ್, ಸಿದ್ದಪ್ಪ, ಟಿ.ಆರ್.ಲಕ್ಕಪ್ಪ, ಡಾ.ಉಮೇಶ್‌ರಾವ್, ಟಿ.ಡಿ.ಸತ್ಯನ್, ಕೆ.ಆರ್.ಚಂದ್ರು, ಮಾರ್ಗದ ಮಧು, ಕೆ.ವಿ.ಪೃಥ್ವಿ, ಸಿ.ಮಲ್ಲಿಕಾರ್ಜುನ್, ಕೆ.ಎನ್.ಬೊಮ್ಮಣ್ಣ, ಪುರಸಭೆ ಸದಸ್ಯರಾದ ಗೋವಿಂದರಾಜು, ವಿಜಯಾ ಚಿನ್ನರಾಜು, ಸುಬ್ಬಣ್ಣ, ಮೋಹನ್ ನಾಯ್ಕ, ಮುಖಂಡರಾದ ರಾಜಾನಾಯ್ಕ, ಕೆ.ಪಿ.ರಾಘವೇಂದ್ರ, ನಾಗೇಶ್, ಎಚ್.ಉಮೇಶ್, ಹುಲ್ಲೇಹಳ್ಳಿ ಲಕ್ಷ್ಮಣ್, ಸುದರ್ಶನ್, ಗಿರೀಶ್, ವೀಣಾ, ಕಾವೇರಿ ಲಕ್ಕಪ್ಪ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net