ಮೋದಿಯಿಂದ ಕಪ್ಪು ಚುಕ್ಕೆ ಇಲ್ಲದ ಆಡಳಿತ

h29-tenginakai
Published on

ಹುಬ್ಬಳ್ಳಿ: ನಗರದ ವಾರ್ಡ್ ನಂ. 45 ರ ನಾಗಶೆಟ್ಟಿಕೊಪ್ಪದ ದೊಡ್ಡ ಓಣಿಯಲ್ಲಿ ಇತ್ತೀಚೆಗೆ ಲೋಕಸಭಾ ಅಭ್ಯರ್ಥಿ ಪ್ರಲ್ಹಾದ ಜೋಶಿ ಪರ ಪ್ರಚಾರ ಸಭೆ ನಡೆಯಿತು.
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಕಳೆದ ಹತ್ತು ವರ್ಷಗಳಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಸರ್ಕಾರವನ್ನು ಪಾರದರ್ಶಕವಾಗಿ ಆಡಳಿತ ನಡೆಸಿದ ಖ್ಯಾತಿ ಮೋದಿ ಅವರಿಗಿದೆ. ವಿಶ್ವದಲ್ಲಿ ಭಾರತವು ಐದನೇ ದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆದಿದೆ. ವಿವಿಧ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿದೆ ಎಂದರು.
ಮಾಜಿ ಉಪ ಮಹಾಪೌರ ಮೇನಕಾ ಹುರಳಿ, ಪ್ರಮುಖರಾದ ಪ್ರವೀಣ ಹುರಳಿ, ವಿನೋದ ರೇವಣಕರ, ಮಣಿಕಂಠ ಶ್ಯಾಗೋಟಿ, ಶಿವಪುತ್ರಪ್ಪ ಸಂಬರಗಿ, ಮಹದೇವಪ್ಪ ಮೆಣಸಿನಕಾಯಿ, ದ್ಯಾಮಣ್ಣ ಗುರಣ್ಣವರ, ಚಂದ್ರು ನೂಲ್ವಿ, ಅಶೋಕ ಬಿಳಗಿ, ಶಂಕ್ರಪ್ಪ ಶಿರೂರ, ಯಲ್ಲಪ್ಪ ಮಾನೆ, ಮಾರುತಿ ಬಿಳಗಿ, ಶೇಖರಗೌಡ ಸೋಮನಗೌಡ್ರ, ಶ್ರೀಕಾಂತ ಪೂಜಾರಿ, ಮಂಜುನಾಥ ಹಳ್ಯಾಳ, ಪವನ ಹಳ್ಳಾಳ, ಶಿವಾನಂದ ಜಮ್ಮಿಹಾಳ, ಶ್ರೀಧರ ತಟ್ಟಿಮನಿ, ರಹೀಮ ಬೇಪಾರಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net