ಮತ್ತೊಮ್ಮೆ ಮೋದಿ ಗೆಲ್ಲಿಸಿ

h5-mahesh tenginakai
Published on

ಹುಬ್ಬಳ್ಳಿ: ಇಲ್ಲಿಯ ವಾರ್ಡ್ ನಂ. 52ರ ಪ್ರಶಾಂತ ನಗರದಲ್ಲಿ ಶಾಸಕ ಮಹೇಶ ಟೆಂಗಿನಕಾಯಿ ಅವರು ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ಪರ ಭಾನುವಾರ ಮನೆ ಮನೆಗೆ ತೆರಳಿ ಪ್ರಚಾರ ನಡೆಸಿದರು. ನಂತರ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು 10 ವರ್ಷಗಳಲ್ಲಿ ದೇಶವನ್ನು ಉತ್ತುಂಗಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಇನ್ನೂ ಐದು ವರ್ಷ ಅವಕಾಶ ನೀಡಿದರೆ, ದೇಶವು ಆರ್ಥಿಕವಾಗಿ ವಿಶ್ವದಲ್ಲಿಯೇ ಬಲಾಢ್ಯವಾಗಲಿದೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರನ್ನು ಗೆಲ್ಲಿಸಿ ಮೋದಿ ಅವರ ಸಂಪುಟದಲ್ಲಿ ಉನ್ನತ ಸ್ಥಾನ ಸಿಗುವಂತೆ ಆಶೀರ್ವಾದ ಮಾಡಬೇಕೆಂದು ವಿನಂತಿಸಿದರು.
ಮಾಜಿ ಮಹಾಪೌರ ಪ್ರಕಾಶ ಕ್ಯಾರಕಟ್ಟಿ, ಪ್ರಮುಖರಾದ ಶಿವು ಶಿಂಧೆ, ಡಾ. ಲಕ್ಷ್ಮಣ ಮಾಮರಡಿ, ಹರೀಶ ಜಂಗ್ಲಿ, ಕಿಶನ ಬಿಲಾನಾ, ಸಂತೋಷ ಖೋಡೆ, ಗೀತಾ ಪ್ರಭು, ಅಕ್ಷಯ ಬದ್ದಿ, ಗೀತಾ ಮುದ್ದಿ, ಭಾಸ್ಕರ ಪೂಜಾರಿ, ವಿದ್ಯಾ ಕೊಂಗಿ, ಮಂಜುನಾಥ ಬ್ಯಾಡಗಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net