ಮೋದಿ ಗೆಲ್ಲಿಸಿ ಅಭಿಯಾನ

7
ಚಿಕ್ಕೋಡಿಯಲ್ಲಿ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಮೋದಿ ಗೆಲ್ಲಿಸಿ ಭಾರತ ಉಳಿಸಿ ಅಭಿಯಾನದ ಪ್ರಚಾರ ಪತ್ರಿಕೆಗಳನ್ನು ಬಿಡುಗಡೆಗೊಳಿಸಿದರು. ಗಂಗಾಧರ ಕುಲಕರ್ಣಿ, ಬಸವರಾಜ ಕಲ್ಯಾಣಿ, ರಾಜು ಅಶ್ವತ್ಥಪುರ, ಕುಮಾರ ಡೊಂಗರೆ ಇತರರಿದ್ದರು.
Published on

ಚಿಕ್ಕೋಡಿ: ಶ್ರೀರಾಮಸೇನೆ ಸಂಘಟನೆಯಿಂದ ಚಿಕ್ಕೋಡಿ ಪಟ್ಟಣದಲ್ಲಿ ಡಿ.31ರಂದು ಬೆಳಗ್ಗೆ 11 ಗಂಟೆಗೆ ಮೋದಿ ಗೆಲ್ಲಿಸಿ ಭಾರತ ಉಳಿಸಿ ಅಭಿಯಾನ ಆಯೋಜಿಸಲಾಗಿದೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತಾನಾಡಿದರು. ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರಿದ ನಂತರ ಮೋದಿ ಅವರನ್ನು ಟಾರ್ಗೆಟ್ ಮಾಡಿ ಅವಮಾನಿಸುತ್ತಿದೆ. 224 ವಿಧಾನಸಭಾ ಹಾಗೂ 28 ಲೋಕಸಭಾ ಕ್ಷೇತ್ರದಲ್ಲಿ ಮೋದಿ ಅವರ ಸಾಧನೆ ಜನರಿಗೆ ತಲುಪಿಸಲು ಅಭಿಯಾನ ಆಯೋಜಿಸಲಾಗಿದೆ. ಸಭೆ, ಸಂವಾದ, ರ‌್ಯಾಲಿ, ಮಹಿಳಾ ಸಮಾವೇಶ, ವಿದ್ಯಾರ್ಥಿ ಸಮಾವೇಶ ಮೂಲಕ ಮೋದಿ ಸಾಧನೆಗಳ ಜಾಗೃತಿ ಮೂಡಿಸಲಾಗುವುದು.

ಕಾರ್ಯಕ್ರಮಕ್ಕೆ ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಬಿಜೆಪಿ ನಾಯಕರಾದ ಈಶ್ವರಪ್ಪ, ಸಿ.ಟಿ. ರವಿ, ಮಾಜಿ ಸಿಎಂ ಕುಮಾರಸ್ವಾಮಿ ಆಗಮಿಸಲಿದ್ದಾರೆ ಎಂದರು. ರಾಜ್ಯದಲ್ಲಿ ಹಿಜಾಬ್ ವಿವಾದ ತಣ್ಣಗಾಗಿತ್ತು. ಸಿಎಂ ಹೇಳಿಕೆ ನೀಡಿದ ಮತ್ತೆ ವಿವಾದದ ಕಿಡಿ ಹತ್ತಿದೆ. ಹಿಜಾಬ್ ನಿಷೇಧ ಆದೇಶ ವಾಪಸ್ ಪಡೆಯಲು ಸಿಎಂ ಸಿದ್ದರಾಮಯ್ಯ? ಹೈಕೋರ್ಟ್ ಆದೇಶ ವಾಪಸ್ ಪಡೆಯಲು ಅವರಿಂದಾಗಲ್ಲ. ಮುಸ್ಲಿಮರಿಗೆ 10 ಸಾವಿರ ಕೋಟಿ ರೂ. ಕೊಡಲು ಅನುದಾನ ಯಾರಪ್ಪಂದು? ಸಿದ್ದರಾಮಯ್ಯ ಹಿಜಾಬ್ ಹೇಳಿಕೆ ವಾಪಸ್ ಪಡೆಯಬೇಕು. ಇಲ್ಲವಾದಲ್ಲಿ ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸುತ್ತೇವೆ. ಮತ್ತೆ ಹಿಜಾಬ್ ಹಾಕಿ ಬಂದರೆ ಕೇಸರಿ ಶಾಲು, ಪೇಟಾ ಹಾಕಿಕೊಂಡು ಬರುವಂತೆ ವಿದ್ಯಾರ್ಥಿಗಳಿಗೆ ಆಹ್ವಾನ ನೀಡುತ್ತೇವೆ ಎಂದರು.

ಗಂಗಾಧರ ಕುಲಕರ್ಣಿ, ಬಸವರಾಜ ಕಲ್ಯಾಣಿ, ರಾಜು ಅಶ್ವತ್ಧಪುರ, ಕುಮಾರ ಡೊಂಗರೆ, ಶಿವರಾಜ ಅಂಬಾರಿ, ನಿಹಾಲ ಹೊಸಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net