ಸಿದ್ದಗಂಗಾ ಮಠಕ್ಕೆ ಭೇಟಿ ನೀಡುವ ಮೋದಿಗೆ ಶ್ರೀಗಳ ಬೆಳ್ಳಿ ವಿಗ್ರಹ ನೆನಪಿನ ಕಾಣಿಕೆ

siddaganga sri jan 02 2020
Published on

ತುಮಕೂರು: ಸಿದ್ದಗಂಗಾ ಮಠಕ್ಕೆ ಭೇಟಿ ನೀಡುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶಿವಕುಮಾರ ಸ್ವಾಮೀಜಿ ಚಿತ್ರ ಹೊಂದಿರುವ 5 ಕೆಜಿ ತೂಕದ ಬೆಳ್ಳಿ ವಿಗ್ರಹ ನೆನಪಿನ ಕಾಣಿಕೆ ನೀಡಲು ಮಠ ಮುಂದಾಗಿದೆ.

ಕಿಸಾನ್​ ಸಮ್ಮಾನ್​ ಯೋಜನೆಗೆ ಚಾಲನೆ ನೀಡಲು ತುಮಕೂರಿಗೆ ಆಗಮಿಸುತ್ತಿರುವ ಪ್ರಧಾನಿ ಮೋದಿ ಅವರು ಮಠಕ್ಕೆ ಭೇಟಿ ಭೇಟಿ ನೀಡಿಶಿವಕುಮಾರ ಶ್ರೀಗಳ ಗದ್ದುಗೆ ದರ್ಶನ ಮಾಡಲಿದ್ದಾರೆ. ನಂತರ ಅಂಗಳದಲ್ಲಿ ಬಿಲ್ವಪತ್ರೆಗೆ ಗಿಡ ನೆಡಲಿದ್ದಾರೆ. ಈ ವೇಳೆ ಅವರಿಗೆ ಶ್ರೀಗಳ ಕುಳಿತಿರುವ ಭಂಗಿಯ ಬೆಳ್ಳಿ ಲೇಪಿತ ವಿಗ್ರಹ ಹಾಗೂ ಬೆಳ್ಳಿ ರುದ್ರಾಕ್ಷಿ ಹಾರ ನೀಡಿ ಗೌರವಿಸಲಾಗುವುದು ಎಂದು ಮಠದ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net