

ಮೈಸೂರು: ನರೇಂದ್ರ ಮೋದಿ 3ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ನಗರದ ಬಿಜೆಪಿ ಕಾರ್ಯಾಲಯದಲ್ಲಿ ಭಾನುವಾರ ಸಂಭ್ರಮಾಚರಣೆ ನಡೆಯಿತು.
ಬಿಜೆಪಿ ಕಚೇರಿಯಲ್ಲಿ ದೊಡ್ಡ ಪರದೆಯಲ್ಲಿ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ವೀಕ್ಷಿಸಲಾಯಿತು. ನಂತರ ಪಟಾಕಿ ಸಿಡಿಸಿ ಸಾರ್ವಜನಿಕರಿಗೆ ಸಿಹಿ ವಿತರಿಸಿ ಕಾರ್ಯಕರ್ತರು ಸಂಭ್ರಮಿಸಿದರು.
ಈ ಸಂದರ್ಭ ಮಾಜಿ ಸಚಿವ ಎನ್. ಮಹೇಶ್, ಮಾಜಿ ಶಾಸಕ ನಿರಂಜನ್, ಮಾಜಿ ಮೇಯರ್ ಶಿವಕುಮಾರ್, ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿಗಳಾದ ಬಿ.ಎಂ, ರಘು, ಕೇಬಲ್ ಮಹೇಶ್, ಉಪಾಧ್ಯಕ್ಷ ಜೋಗಿ ಮಂಜು, ಪ್ರಮುಖರಾದ ಟಿ.ರಮೇಶ್, ಹೇಮಾ ನಂದೀಶ್, ಶಿವಕುಮಾರ್, ರಾಕೇಶ್ ಗೌಡ ಹಾಗೂ ಇತರರು ಇದ್ದರು.