ದೇಶದ ಪ್ರಗತಿಗಾಗಿ ಮೋದಿ ಪರಿಶ್ರಮ

11 MGD-1
Published on

ಮುಂಡರಗಿ: ತಾಲೂಕಿನ ಡೋಣಿ ಗ್ರಾಮದಲ್ಲಿ ಬಿಜೆಪಿ ಡಂಬಳ ಮಂಡಲ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಗ್ರಾಮ ಚಲೋ ಅಭಿಯಾನಕ್ಕೆ ಡಂಬಳ ಮಂಡಳ ಅಧ್ಯಕ್ಷ ರವಿ ಕರಿಗಾರ ಚಾಲನೆ ನೀಡಿದರು.
ರವಿ ಕರಿಗಾರ ಮಾತನಾಡಿ, ಮತ್ತೊಮ್ಮೆ ಮೋದಿ ಘೋಷವಾಕ್ಯದೊಂದಿಗೆ ಬಿಜೆಪಿಯಿಂದ ಗ್ರಾಮ ಚಲೋ ಅಭಿಯಾನ ನಡೆಸಲಾಗುತ್ತಿದೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಆಯುಷ್ಮಾನ್ ಭಾರತ್, ಕಿಸಾನ್ ಸಮ್ಮಾನ್, ಉಜ್ವಲಾ ಯೋಜನೆ, ಜಲಜೀವನ್ ಮಿಷನ್, ನಾರಿಶಕ್ತಿ, ಜನೌಷಧಿ ಕೇಂದ್ರಗಳ ಸ್ಥಾಪನೆ ಸೇರಿ ಎಲ್ಲ ವರ್ಗದ ಜನರಿಗಾಗಿ ಹಲವಾರು ಜನಪರ ಯೋಜನೆಗಳನ್ನು ಜಾರಿ ತಂದಿದ್ದಾರೆ. ದೇಶದ ಪ್ರಗತಿಗಾಗಿ ನಿರಂತರವಾಗಿ ಶ್ರಮವಹಿಸಿ ಕೆಲಸ ಮಾಡಲಾಗುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಮೋದಿ ಅವರನ್ನು ಅಧಿಕಾರಕ್ಕೆ ತರುವ ಮೂಲಕ ದೇಶದ ಸಮಗ್ರ ಏಳಿಗೆಗೆ ಕೈಜೋಡಿಸಬೇಕು ಎಂದು ತಿಳಿಸಿದರು.
ಪ್ರಭು ಕೊರ್ಲಹಳ್ಳಿ, ಈಶ್ವರಗೌಡ ಪಾಟೀಲ, ಪ್ರಕಾಶ ಒಲಿ, ಯಲ್ಲಪ್ಪ ಕುಂಬಾರ, ಜಗದೀಶ ತಳವಾರ, ರಮೇಶ ಹಡಪದ, ತೊಗರೆಪ್ಪ ಕೊರವರ, ಅಲ್ಲಾಭಕ್ಷಿ ದೊಡ್ಡಮನಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net