ಚಿಂಚೋಳಿಯಲ್ಲಿ ಮೋದಿ ಮತ್ತೊಮ್ಮೆ ಪ್ರಧಾನಿ ಸಂಕಲ್ಪದೊಂದಿಗೆ ರ‍್ಯಾಲಿ

PH 04
Published on

ಚಿಂಚೋಳಿ: ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವ ಸಂಕಲ್ಪದೊAದಿಗೆ ನಮೋ ಬ್ರಿಗೇಡ್‌ನಿಂದ ಚಕ್ರವರ್ತಿ ಸೂಲಿಬೆಲೆ ನೇತೃತ್ವದಲ್ಲಿ ತಾಲೂಕಿನ ವಿವಿಧೆಡೆ ಭಾನುವಾರ ಅದ್ದೂರಿ ಬೈಕ್ ರ‍್ಯಾಲಿ ನಡೆಯಿತು.

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಚಾಂಗಲೇರಾದ ಶ್ರೀ ವೀರಭದ್ರೇಶ್ವರ ಸನ್ನಿಧಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಬೈಕ್ ರ‍್ಯಾಲಿ ಆರಂಭಿಸಲಾಯಿತು. ತುಮಕುಂಟಾ, ನಾಗಇದಲಾಯಿ, ಕೊಳ್ಳೂರ, ದೇಗಲಮಡಿ, ಐನೋಳ್ಳಿ ಮಾರ್ಗವಾಗಿ ಚಿಂಚೋಳಿವರೆಗೂ ಬೈಕ್‌ಗಳ ಸಂಚಾರ ನಡೆಯಿತು. ಪಟ್ಟಣದಲ್ಲಿ ಬಡಿ ದರ್ಗಾ, ಮಹಾಂತೇಶ್ವರ ಮಠ, ಬಸ್ ನಿಲ್ದಾಣ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತ, ಬಸವೇಶ್ವರ ವೃತ್ತ ಸೇರಿ ಪ್ರಮುಖ ಮಾರ್ಗದಲ್ಲಿ ರ‍್ಯಾಲಿ ಸಂಚರಿಸಿತು.

ಪ್ರಮುಖರಾದ ಸುನೀಲ್ ನಿಡಗುಂದಾ, ಅಭಿಷೇಕ ಮಲಕನೂರ, ಮಲ್ಲಿಕಾರ್ಜುನ ಉಡುಪಿ, ಘಟೋತ್ಕಚ, ಅವಿನಾಶ ಮೋತಕಪಳ್ಳಿ, ಸುನೀಲ್ ಕೊರಡಂಪಳ್ಳಿ, ಅಮರ ಬಬಲಾದಿ, ಲೋಕೇಶ ಶೆಳ್ಳಗಿ, ಸಂಕೇತ ಬಬಲಾದಿ, ವಸಂತ ಇಟಗಿ, ಹಣಮಂತ ಕೋರಿ, ಸುನೀಲ್ ಮನ್ನಳ್ಳಿ, ಶಂಕರ, ಉದಯ ಮಾಕಾ, ಕಿರಣ್ ಪಂಚಾಳ, ವೀರೇಂದ್ರ ಮುರುಡಾ ಇತರರಿದ್ದರು.

ದಾರಿಯುದ್ದಕ್ಕೂ ಯುವಕರಿಂದ ಭಾರತ ಮಾತಾಕಿ ಜೈ.. ಘರ್‌ಘರ್ ಮೋದಿ.. ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಪರ ಘೋಷಣೆಗಳು ಮೊಳಗಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net