

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಅಗತ್ಯ ವಸ್ತುಗಳ ಜಿಎಸ್ಟಿಯನ್ನು ಕಡಿಮೆ ಮಾಡುವ ಮೂಲಕ ಜನಸಾಮಾನ್ಯರ ಬದುಕನ್ನು ಇನ್ನಷ್ಟು ಸುಲಭವಾಗಿಸಿದ್ದಾರೆ ಎಂದು ವಿಜಯನಗರ ಬಿಜೆಪಿ ಮುಖಂಡ ಎಚ್.ರವೀಂದ್ರ ಬಣ್ಣಿಸಿದ್ದಾರೆ.
ವಿಜಯನಗರದಲ್ಲಿ ಆಯೋಜಿಸಿದ್ದ ಜಿಎಸ್ಟಿ ಕಡಿತ ಸಂಭ್ರಮಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರಧಾನಿ ಮೋದಿಯವರು ಕಳೆದ 11 ವರ್ಷದಿಂದ ಬಡವರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ನೇತೃತ್ವದ ಮೋದಿ ಸರಕಾರದಿಂದ ದೇಶ ಅಭಿವೃದ್ಧಿಯಕಡೆಗೆ ಮುನ್ನಡೆಯುತ್ತಿದೆ. ಜಗತ್ತಿನ 4ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಭಾರತ ಬೆಳೆದಿದೆ ಎಂದರು.
ಸಂಭ್ರಮಾಚರಣೆಯಲ್ಲಿ ಬಿಜೆಪಿಯ ರಾಜ್ಯ ವಕ್ತಾರ ಅಶ್ವಥ್ ನಾರಾಯಣ್, ವಿಜಯನಗರ ಮಂಡಲ ಅಧ್ಯಕ್ಷ ವಿ.ರಾಮಾಂಜಿನಿ, ಮುಖಂಡರುಗಳಾದ ನವೀನ್ ಹೆಚ್. ರವೀಂದ್ರ, ಆನಂದ ಗೌಡ ಎ.ಜಿ., ಗೋಪಿನಾಥರಾಜು, ವಿಜಯ್ ಕೃಷ್ಣ, ಎಲ್.ಸಿದ್ದರಾಜು, ಕೃಷ್ಣ, ಸಿದ್ದರಾಜು ಅಗ್ರಹಾರ, ಅಭಿಷೇಕ್, ಮಹಿಳಾ ಘಟಕದ ಅಧ್ಯಕ್ಷೆ ಪುತಲಿಬಾಯಿ ಹಾಗೂ ವಿಜಯನಗರ ವಿಧಾನಸಭಾ ಕ್ಷೇತ್ರದ ಹಲವು ಬಿಜೆಪಿ ಮುಖಂಡರು ಭಾಗಿಯಾಗಿದ್ದರು.