

ವಿಜಯಪುರ : ಪ್ರಧಾನಿ ನರೇಂದ್ರ ಮೋದಿ ದೇಶ ಸೇವೆ ಹಾಗೂ ಭಾರತ ಮಾತೆಯ ಸೇವೆಗೆ ತಮ್ಮನ್ನು ಅರ್ಪಿಸಿಕೊಂಡು ದುಡಿಯುತ್ತಿದ್ದಾರೆ ಎಂದು ಸಂಸದ ಕೆ.ಸುಧಾಕರ್ ತಿಳಿಸಿದರು. ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಪ್ರಯುಕ್ತ ಬುಧವಾರದಿಂದ ಅ.2ರವರೆಗೆ ಆಯೋಜಿಸಿರುವ ಸ್ವಸ್ಥ ನಾರಿ ಸಶಕ್ತ ಪರಿವಾರ ಅಭಿಯಾನ ಉದ್ಘಾಟಿಸಿ ಮಾತನಾಡಿದರು.
ಹೆಣ್ಣೊಂದು ಕಲಿತರೆ ಶಾಲೆ ತೆರೆದಂತೆ ಎಂಬಂತೆ, ಆರೋಗ್ಯಯುಕ್ತ ಮಹಿಳೆ& ಆರೋಗ್ಯಯುಕ್ತ ಸಮಾಜ ಎಂಬ ಯೋಜನೆಯಂತೆ ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಪ್ರಯುಕ್ತ ಸ್ವಸ್ಥ ನಾರಿ ಸಶಕ್ತ ಪರಿವಾರ ಎಂಬ 15 ದಿನಗಳ ಕಾಲ ಸೇವಾಪಾಕ ಯೋಜನೆಯನ್ನು ಕೇಂದ್ರ ಸರ್ಕಾರ ರೂಪಿಸಿದೆ ಎಂದರು.
ಗ್ರಾಮಾಂತರ ಆರೋಗ್ಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ವಿವೇಕ್ ದೊರೆ ಮಾತನಾಡಿ, ಒಬ್ಬ ಮಹಿಳೆ ಆರೋಗ್ಯವಾಗಿದ್ದರೆ ಸಂಪೂರ್ಣ ಕುಟುಂಬವು ಆರೋಗ್ಯವಾಗಿರಲು ಸಾಧ್ಯವಾಗುತ್ತದೆ, ಇದರೊಂದಿಗೆ ದೇಶದ ಆರೋಗ್ಯವು ಉತ್ತಮವಾಗಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಈ ಅಭಿಯಾನದಲ್ಲಿ ಎಲ್ಲ ಮಹಿಳೆಯರಿಗೂ ವೈದ್ಯಕಿಯ ಪರೀೆ ಮತ್ತು ಆರೋಗ್ಯ ಸೇವೆಗಳು ಲಭ್ಯವಾಗುವಂತೆ ನೋಡಿಕೊಳ್ಳುವುದರ ಜತೆಗೆ ಆರೋಗ್ಯಕರ ಜೀವನಶೈಲಿ ಮತ್ತು ಆರೋಗ್ಯದ ಮಾನದಂಡಗಳನ್ನು ಕಾಯ್ದುಕೊಳ್ಳುವುದು, ಆರೋಗ್ಯ ಸೇವೆಗಳ ಪ್ರವೇಶ ಸುಲಭವಾಗಿ ದೊರೆಯುವಂತೆ ಮಾಡುವುದರೊಂದಿಗೆ ನಾಗರಿಕರು ಈ ಯೋಜನೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾ ಒಬಿಸಿ ಮೋರ್ಚಾ ಅಧ್ಯಕ್ಷ ಕನಕರಾಜು, ಮುಖಂಡರಾದ ಪ್ರಭು, ರವಿಕುಮಾರ್, ಪುರಸಭೆ ಅಧ್ಯೆ ಭವ್ಯಾ ಮಹೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ನಾರಾಯಣಸ್ವಾಮಿ, ಪುರಸಭಾ ಸದಸ್ಯರಾದ ಬೈರೇಗೌಡ, ರವಿ, ಶಿಲ್ಪ ಅಜಿತ್, ಜೆಡಿಎಸ್ ಕಾರ್ಯದರ್ಶಿ ಮಹೇಶ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಿಎಸ್ಒ ಡಾ.ಹೇಮಾವತಿ, ಜಿಲ್ಲಾ ಕ್ಷಯರೋಗ ನಿಮೂರ್ಲನಾಧಿಕಾರಿ ಡಾ.ನಾಗೇಶ್, ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಅಧಿಕಾರಿಗಳಾದ ಆರ್ಸಿಎಚ್ಒ ಸೀಮಾ, ಕುಟುಂಬ ಕಲ್ಯಾಣ ಅಧಿಕಾರಿ ಎಫ್ಡಬ್ಲೂ$್ಯಒ ಡಾಕ್ಟರ್ ಕೋಮಲಾ, ತಾಲೂಕು ಆರೋಗ್ಯ ಅಧಿಕಾರಿ ಡಾ.ಮುತಾಹಿರ್ ಹಫೀಜ್ ಉಪಸ್ಥಿತರಿದ್ದರು. ಪುರಸಭಾ ಅಧ್ಯೆ ಭವ್ಯಾ ಮಹೇಶ್ ಹಾಗೂ ಸದಸ್ಯರು ಮನವಿ ಪತ್ರ ಸಲ್ಲಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ನಾರಾಯಣಸ್ವಾಮಿ, ಸದಸ್ಯರಾದ ಬೈರೇಗೌಡ, ರವಿ, ಶಿಲ್ಪಾ ಅಜಿತ್, ಜೆಡಿಎಸ್ ಕಾರ್ಯದರ್ಶಿ ಮಹೇಶ್ ಇದ್ದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ನೆಗಡಿ, ಕೆಮ್ಮು, ಜ್ವರ, ಹೆರಿಗೆ ಸಮಸ್ಯೆಗಳು ಮುಂತಾದವುಕ್ಕೆ ಚಿಕಿತ್ಸೆ ನೀಡಲಾಗುತ್ತಿದ್ದು, ಬದಲಾದ ಯೋಜನೆಗಳಂತೆ ಇದೀಗ ಮಧುಮೇಹ, ರಕ್ತದೊತ್ತಡ, ಕ್ಯಾನ್ಸರ್ ಬಾಯಿ, ಸ್ತನ, ಗರ್ಭಾಶಯ ಮುಂತಾದ ಕ್ಯಾನ್ಸರ್ಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ, ಸಕ್ಕರೆ ಹಾಗೂ ಎಣ್ಣೆ ಪದಾರ್ಥಗಳ ಬಳಕೆಯಿಂದ ದೇಹದಲ್ಲಿ ಶೇಕಡ ಹತ್ತರಷ್ಟು ಕೊಬ್ಬು ಕಡಿಮೆ ಮಾಡುವುದು ಮಕ್ಕಳಿಗೆ ಪೌಷ್ಟಿಕ ಆಹಾರಗಳ ಅಭ್ಯಾಸ ಮುಂತಾದವುಗಳ ಬಗ್ಗೆ ಮನವರಿಕೆ ಮಾಡಲಾಗುತ್ತಿದೆ. | ಡಾ.ಲಕ್ಕ ಕೃಷ್ಣಾರೆಡ್ಡಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಆರೋಗ್ಯ ಅಧಿಕಾರಿ