

ವಿಜಯಪುರ:ಪ್ರಧಾನಿ ನರೇಂದ್ರ ಮೋದಿ ನಾವು ಕಂಡ ಅದ್ಭುತ ಜನನಾಯಕ. ಕೇವಲ ಜನಸೇವೆಯನ್ನೇ ತಮ್ಮ ಬದುಕಿನ ಧ್ಯೇಯವಾಗಿಸಿಕೊಂಡು ದೇಶದ ಚುಕ್ಕಾಣಿ ಹಿಡಿದು ಭಾರತವನ್ನು ಜಾಗತಿಕಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದಾರೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ಭಾರತೀಯ ಜನತಾ ಪಕ್ಷದ ಜಿಲ್ಲಾ ವೈದ್ಯಕಿಯ ಪ್ರಕೋಷ್ಠದ ಸಹಯೋಗದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ 75ನೇ ಜನ್ಮದಿನದ ಪ್ರಯುಕ್ತ ವಿಜಯಪುರ ತಾಲೂಕಿನ ಯೋಗಾಪುರದ ಹನುಮಾನ ದೇವಸ್ಥಾನ ಆವರಣದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಆರೋಗ್ಯ ಉಚಿತ ತಪಾಸಣೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ವೈದ್ಯರಾದ ಡಾ. ಪ್ರೀತಿಕ ಮಂದಿಗಾತ್ರಿ, ಡಾ. ಸಂಗಮೇಶ ಮಧುಪತಿ, ಶ್ರೀಮಂಗಲ, ಡಾ. ಅರವಿಂದ ಡಾಳಕುರ, ಡಾ. ಬಿ.ಎನ್. ಮಾಲಿಪಾಟೀಲ, ಡಾ. ಅಶೋಕ ಪಾಟೀಲ, ಡಾ. ಪ್ರಭು ದರ್ಶನದ, ಡಾ. ವಿಶ್ವನಾಥ ಚಿತ್ರಾರ, ಡಾ. ಸಂಜು ರಿತ್ಳಾನ ಅವರು ರೋಗಿಗಳ ತಪಾಸಣೆ ನಡೆಸಿದರು.ಪದ ಬೆಳಗಾವಿ ವಿಭಾಗದ ಪ್ರಭಾರಿ ಚಂದ್ರಶೇಖರ ಕವಟಗಿ, ಮುಖಂಡರಾದ ವಿಜುಗೌಡ ಪಾಟೀಲ, ಡಾ. ಸುರೇಶ ಬಿರಾದಾರ, ಎಸ್ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ, ಸಂಜೀವ ಐಹೊಳೆ, ಮಹೇಂದ್ರ ನಾಯಕ, ಭೀಮಸಿಂಗ ರಾಥೋಡ, ಉಮೇಶ ಕೋಳಕುರ, ಮಲ್ಲಿಕಾರ್ಜುನ ಜೋಗುರ, ಮಲ್ಲು ಕಲಾದಗಿ, ಸಾಬು ಮಶ್ಯಾಳ, ಡಾ. ವಿರೇಶ ಪಾಟೀಲ, ಈರಣ್ಣ ರಾವೂರ, ಡಾ. ಅರವಿಂದ ಡಾಣಕಶಿರೂರ, ಡಾ. ಅಶೋಕ ವಾಲಿ, ವಿಜಯ ಜೋಶಿ, ಭರತ ಕುಲಕರ್ಣಿ, ವಿಶ್ವನಾಥ ಪತ್ತಾರ, ಸಿದ್ದನಗೌಡ ಬಿರಾದಾರ, ಸಂಜು ಶಿಳ್ಳಿನ, ಚನಬಸಪ್ಪ ಮರೆಗುದ್ದಿ, ಮೋಹನಸಿಂಗ ರಜಪೂತ ಮತ್ತಿತರರಿದ್ದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನದ ಪ್ರಯುಕ್ತ ಯೋಗಾಪುರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ ಉಚಿತ ತಪಾಸಣೆ ಶಿಬಿರವನ್ನು ಗಣ್ಯರು ಉದ್ಘಾಟಿಸಿದರು. ಈರಣ್ಣ ಕಡಾಡಿ, ಚಂದ್ರಶೇಖರ ಕವಟಗಿ, ವಿಜುಗೌಡ ಪಾಟೀಲ ಮತ್ತಿತರರಿದ್ದಾರೆ.